PUTTUR: ಪುತ್ತೂರಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ...!!!
ಪುತ್ತೂರು: ಪುತ್ತೂರಿಗೆ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂಗೆ ಅವಕಾಶ ನೀಡಿರುವುದು ರಾಜ್ಯ ಸರಕಾರದ ದೊಡ್ಡ ಕೊಡುಗೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರಿನಲ್ಲಿ ಸುಸಜ್ಜಿತವಾದ ಒಳಗಾಂಣ ಹೊರಾಂಗಣ ಇರುವಂತಹ ಕ್ರಿಕೆಟ್ ಕ್ರೀಡಾಂಗಣಕ್ಕೆ 23 ಎಕ್ರೆ 26 ಸೆಂಟ್ಸ್ ಜಾಗದಲ್ಲಿ ಕ್ರೀಡಾಂಗಣ ಮಾಡಲು ಮುಖ್ಯಮಂತ್ರಿ ಕ್ಯಾಬಿನೆಟ್‌ನಲ್ಲಿ ಕಳೆದ ಗುರುವಾರ ಅನುಮತಿ ನೀಡಲಾಗಿದೆ. ಸುಮಾರು 50 ರೂ. ಕೋಟಿ ವೆಚ್ಚದಲ್ಲಿ ಕರ್ನಾಟಕ ಸ್ಟೇಟ್ ಅಸೋಸಿಯೇಶನ್ ಕ್ರೀಡಾಂಗಣ ನಿರ್ಮಾಣ ಮಾಡಿ, ಮುಂದಿನ ದಿನ ರಾಜ್ಯಮಟ್ಟದ ರಣಜಿ ಪಂದ್ಯಾಕೂಟ ಕೂಡಾ ಇಲ್ಲಿ ಆಗಲು ನಮ್ಮ ಸರಕಾರ ಕಾರ್ಯಪ್ರವೃತವಾಗಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕ್ರೀಡಾಸಚಿವ ನಾರಾಯಣ ಗೌಡ, ಸಂಸದ ನಳಿನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಕಾನೂನು ಸಚಿವ ಮಾಧು ಸ್ವಾಮಿ ಅವರಿಗೆ ಹಾಗೂ ವಿಶೇಷವಾಗಿ ಕ್ರೀಡಾಂಗಣ ಆಗಬೇಕೆಂದು ಬೆಳಗಾಂ ಅಧಿವೇಶನಕ್ಕೂ ನಮ್ಮನ್ನು ಭೇಟಿ ಮಾಡಿ ನೆನಪಿಸುತ್ತಿದ್ದ ವಿಶ್ವನಾಥ ನಾಯಕ್ ಅವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಮುಂದಿನ ದಿನ ಕ್ರಿಕೆಟ್‌ನಲ್ಲಿ ಪುತ್ತೂರು ಉತ್ತಮ ಸ್ಥಾನ ಮಾನ ಪಡೆಯು ಕ್ರೀಡಾಂಗಣ ಕಾರಣವಾಗಲಿ ಎಂದರು.