ಮಳಲಿ ಮಸೀದಿ ವಿವಾದ: VHP ಅರ್ಜಿ ಸ್ವೀಕಾರ; ಮಸೀದಿ ಅರ್ಜಿ ವಜಾ!
Wednesday, November 9, 2022
ಮಂಗಳೂರು: ರಾಷ್ಟ್ರಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿ ಕರ್ನಾಟಕದ ಜ್ಞಾನವ್ಯಾಪಿ ಎಂದೇ ಉಲ್ಲೇಖಿಸಲ್ಪಟ್ಟ ಮಳಲಿ ಮಸೀದಿ ವಿವಾದ ಸಂಬಂಧದ ತೀರ್ಪನ್ನು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ನೀಡಿದೆ.
ಮಸೀದಿಯ ಸರ್ವೇ ನಡೆಸಲು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ವಿಶ್ವ ಹಿಂದೂ ಪರಿಷತ್ ನ ಅರ್ಜಿಯನ್ನು ನ್ಯಾಯಾಲಯವು ಸ್ವೀಕರಿಸಿದೆ. ಇದೇ ವೇಳೆ, ಮಸೀದಿಯ ಜೀರ್ಣೋದ್ಧಾರ ಕಾಮಗಾರಿಗಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಮಸೀದಿ ಆಡಳಿತ ಕಮಿಟಿ ಮಾಡಿದ್ದ ಮನವಿಯನ್ನು ನ್ಯಾಯಾಲಯವು ವಜಾ ಮಾಡಿತು.
ಕೋರ್ಟ್ ಕಮೀಷನರ್ ನೇಮಿಸಿ ಮಸೀದಿ ಸರ್ವೇಗಾಗಿ ವಿಶ್ವ ಹಿಂದೂ ಪರಿಷತ್ ಮನವಿ ಮಾಡಿತ್ತು. ಇದನ್ನು ಪುರಸ್ಕರಿಸಿರುವ ನ್ಯಾಯಾಲಯವು ಸಿವಿಲ್ ಕೋರ್ಟ್ ವ್ಯಾಪ್ತಿಯಲ್ಲೇ ವಿಚಾರಣೆಗೆ ಅವಕಾಶ ನೀಡಿದೆ. 2023 ರ ಜನವರಿ 8 ಕ್ಕೆ ಮುಂದಿನ ವಿಚಾರಣೆ ದಿನ ನಿಗದಿಪಡಿಸಲಾಗಿದೆ.