ಉಡುಪಿ: ಒಂಟಿತನದ ಕೊರಗು; ವಿವಾಹಿತ ಮಹಿಳೆ ಆತ್ಮಹತ್ಯೆಗೆ ಶರಣು!
Sunday, November 6, 2022
ಉಡುಪಿ: ಒಂಟಿತನದ ಕೊರಗಿನಿಂದ ವಿವಾಹಿತ ಮಹಿಳೆಯೋರ್ವರು ಇಲಿ ಪಾಷಣ ಸೇವಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಹಂದಾಡಿ ಬಳಿ ನಡೆದಿದೆ.
ಮೃತ ಮಹಿಳೆಯನ್ನು ಶೈಜು ಥೋಮಸ್ ಎಂಬವರ ಪತ್ನಿ ಬಿನ್ನಿ (30) ಎಂದು ಗುರುತಿಸಲಾಗಿದೆ. ಶೈಜು ಥೋಮಸ್ ದುಬೈಯಲ್ಲಿ ಉದ್ಯೋಗದಲ್ಲಿದ್ದು , ಬಿನ್ನಿ ತನ್ನ ಮಗಳೊಂದಿಗೆ ಮನೆಯ ಒಂದನೇ ಮಹಡಿಯಲ್ಲಿ ವಾಸವಿದ್ದರು ಎನ್ನಲಾಗಿದೆ. ಕೆಳ ಅಂತಸ್ತಿನಲ್ಲಿ ಅವರ ಅತ್ತೆ ಹಾಗೂ ಮಾವ ವಾಸವಾಗಿದ್ದರು.
ಮೇಲಂತಸ್ತಿನಲ್ಲಿ ಮಗುವಿನೊಂದಿಗೆ ಒಂಟಿಯಾಗಿ ವಾಸವಾಗಿರುವ ಕೊರಗಿನಲ್ಲಿ ಬಿನ್ನಿ ಅಕ್ಟೋಬರ್ 26 ರಂದು ರಾತ್ರಿ ಡೆತ್‌ನೋಟ್ ಬರೆದಿಟ್ಟು ಇಲಿ ಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇವರು ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ . ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.