-->
ರಾಜಕೀಯ ಅನ್ನೋದು 'ಥ್ಯಾಂಕ್ ಲೆಸ್' ಕೆಲಸ : ಯಶ್

ರಾಜಕೀಯ ಅನ್ನೋದು 'ಥ್ಯಾಂಕ್ ಲೆಸ್' ಕೆಲಸ : ಯಶ್



ಮುಂಬೈ: ನಾನು ಏನಿದ್ದರೂ ನನ್ನನ್ನು ಮೊದಲು ಬದಲಿಸಿಕೊಳ್ಳುವೆ‌. ಜನರ ಜೀವನ ಬದಲಿಸಲು ಅನೇಕ ಮಾರ್ಗಗಳಿವೆ. ರಾಜಕೀಯ ಎನ್ನುವುದು ಥ್ಯಾಂಕ್ ಲೆಸ್ ಕೆಲಸ, ನನಗೆ ಅದರಲ್ಲಿ ಆಸಕ್ತಿ ಇಲ್ಲ ಎನ್ನುವುದಾಗಿ 'ಕೆಜಿಫ್' ನಾಯಕ ಯಶ್ ತಿಳಿಸಿದ್ದಾರೆ. 

ಇಂಡಿಯಾ ಟುಡೇ ನೀಡಿದ ಸಂದರ್ಶನದಲ್ಲಿ ಅವರು ತಮಗಿರುವ ರಾಜಕೀಯ ನಿರಾಸಕ್ತಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. 

ದಕ್ಷಿಣ ಭಾರತದ ಚಿತ್ರಗಳ ದಿಕ್ಕು ಬದಲಿಸಿದ್ದು ಬಾಹುಬಲಿ, ನಂತರ 'ಕೆಜಿಎಫ್' ಅದೇ ಟ್ರೆಂಡ್ ಅನ್ನು ಈಗ ಮುಂದುವರೆಸುತ್ತಾ ಬಂದಿದೆ ಎಂದರು. ಈ ಹಿಂದೆ ಹಿಂದಿಗೆ ಡಬ್ ಆಗುತ್ತಿದ್ದ ದಕ್ಷಿಣ ಭಾರತದ ಸಿನೆಮಾಗಳನ್ನು ಅಪಹಾಸ್ಯ ಮಾಡುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಜನ ದಕ್ಷಿಣದ ಸಿನೆಮಾಗಳನ್ನು ಇಷ್ಟಪಡುತ್ತಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು. 


Ads on article

Advertise in articles 1

advertising articles 2

Advertise under the article