-->
ಸ್ಯಾಟಲೈಟ್ ಫೋನ್ ಸದ್ದು; ಬೆಂದ್ರಾಳ ಅರಣ್ಯದಲ್ಲಿ ತೀವ್ರ ಶೋಧ!

ಸ್ಯಾಟಲೈಟ್ ಫೋನ್ ಸದ್ದು; ಬೆಂದ್ರಾಳ ಅರಣ್ಯದಲ್ಲಿ ತೀವ್ರ ಶೋಧ!

 


ಬೆಳ್ತಂಗಡಿ: ಮಂಗಳೂರು ನಗರದ ನಾಗುರಿಯಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ನಡೆಸಿದ ಹಿಂದಿನ ದಿನ ಬೆಳ್ತಂಗಡಿ ತಾಲೂಕಿನ ಬೆಂದ್ರಾಳದಲ್ಲಿ ನಿಷೇಧಿತ ಸಾಟಲೈಟ್ ಫೋನ್ ಸದ್ದು ಮಾಡಿದ್ದು, ಪೊಲೀಸರನ್ನು ಚಿಂತೆಗೀಡು ಮಾಡಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಪೊಲೀಸರು ಬೆಂದ್ರಾಳದಲ್ಲಿ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ. 

ನವೆಂಬರ್ 18 ರಂದು ಸಂಜೆ 5 ಗಂಟೆ ಸಮಯಕ್ಕೆ ತುರಾಯ ಕಂಪೆನಿಯ ನಿಷೇಧಿತ ಸಾಟಲೈಟ್ ಸಂಪರ್ಕ ಸಾಧಿಸಿರುವುದು ಆಂತರಿಕ ಭದ್ರತಾ ಪಡೆಗೆ RAW ಮೂಲಕ ಗೊತ್ತಾಗಿದೆ. ಅದರಂತೆ ಆಂತರಿಕ ಭದ್ರತಾ ಇಲಾಖೆ ಹಾಗೂ ಸ್ಥಳೀಯ ಪೊಲೀಸರಿಗೆ ತನಿಖೆ ಮಾಡಲು ಮಾಹಿತಿ ರವಾನಿಸಿದ್ದಾರೆ.

ಧರ್ಮಸ್ಥಳ ಪೊಲೀಸರು ಹಾಗೂ ಮಂಗಳೂರು ಆಂತರಿಕ ಭದ್ರತಾ ಇಲಾಖೆಯ ಇನ್ಸ್ ಪೆಕ್ಟರ್ ಚಿಂದಾನಂದ್ ಮತ್ತು ತಂಡ ಶುಕ್ರವಾರ ಬೆಂದ್ರಾಳ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.





ಶನಿವಾರ ಮತ್ತೆ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ ಕುಮಾರ್ ಡಿ ಮತ್ತು ತಂಡ ತೋಟತ್ತಾಡಿ ಗ್ರಾಮದ ಬಾರೆಮನೆ ನಿವಾಸಿಗಳಾದ ರುಕ್ಮಯ ಗೌಡ ಮನೆ ಮತ್ತು ಚೆಲುವಮ್ಮ ಮನೆಯಲ್ಲಿ ಮಾಹಿತಿ ಸಂಗ್ರಹಿಸಿ ಬೆಂದ್ರಾಳ ಸುತ್ತಮುತ್ತಲಿನ ಸುಮಾರು ಐದು ಕಿ.ಮೀ. ಅರಣ್ಯ ಪ್ರದೇಶದೊಳಗೆ ಹುಡುಕಾಟ ನಡೆಸಿ ನಂತರ ಸಾಟಲೈಟ್ ಕರೆ ಹೋದ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದರು.

ಸಾಟಲೈಟ್ ಕರೆ ಹೋದ ಪ್ರದೇಶಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ ಕುಮಾರ್ ಡಿ ನೇತೃತ್ವದಲ್ಲಿ ಸಿಬ್ಬಂದಿಗಳಾದೆ ಮಹಮ್ಮದ್ ಅಸ್ಲಾಮ್, ಪ್ರಶಾಂತ್, ರಾಜೇಶ್ ಹಾಗೂ ಸ್ಥಳೀಯರಾದ ಮೋಹನ್ ಗೌಡ, ಉಮೇಶ್.ಬಿ, ಸತೀಶ್ ಬಳ್ಳಿ, ಕಾರ್ತಿಕ್ ಪೊಲೀಸರಿಗೆ ಕಾಡಿನಲ್ಲಿ ದಾರಿತೋರಿಸಲು ಸಹಕರಿಸಿದರು.

Ads on article

Advertise in articles 1

advertising articles 2

Advertise under the article