
ಧರ್ಮಸ್ಥಳಕ್ಕೆ ಭೇಟಿ ನೀಡಿದ ರಿಷಬ್ ದಂಪತಿ; ಹೆಗಡೆ ದಂಪತಿ ಜೊತೆ ಮಾತುಕತೆ
Wednesday, November 2, 2022
ಬೆಳ್ತಂಗಡಿ: ಕಾಂತಾರ ಸಿನೆಮಾ ಸಕ್ಸಸ್ ನಂತರ ಬುಧವಾರ ರಿಷಬ್ ಶೆಟ್ಟಿ ದಂಪತಿ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ಇದೇ ಸಂದರ್ಭ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ದಂಪತಿ ಜೊತೆಗೆ ಮಾತುಕತೆ ನಡೆಸಿದರು.
ಪತ್ನಿ ಪ್ರಗತಿ, ನಟ ಪ್ರಮೋದ್ ಶೆಟ್ಟಿ ಜೊತೆಗೂಡಿ ಆಗಮಿಸಿದ ರಿಷಬ್ ಶೆಟ್ಟಿ ಡಾ. ವೀರೇಂದ್ರ ಹೆಗಡೆ ಅವರಿಂದಲೂ ಆಶೀರ್ವಾದ ಪಡೆದರು.
ಕೆಲ ಹೊತ್ತು ಸಿನೆಮಾ ಕುರಿತು ಹೆಗಡೆ ದಂಪತಿ ಜೊತೆ ಮಾತನಾಡಿದರು. ಸಿನೆಮಾ ಕುರಿತಂತೆ ಧರ್ಮಾಧಿಕಾರಿಯವರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ರಿಷಬ್, ಕಾಂತಾರ ಟ್ರೇಲರ್ ರಿಲೀಸ್ ಆದಾಗಲೂ ಧರ್ಮಸ್ಥಳಕ್ಕೆ ಬಂದಿದ್ದೆ, ಸಿನೆಮಾ ಬಿಡುಗಡೆಗೂ ಮುನ್ನ ಬಂದಿದ್ದೆ. ಬಿಡುಗಡೆ ಆದ ಬಳಿಕ ಸಾಕಷ್ಟು ಬಾರಿ ಬರಬೇಕು ಅಂದ್ಕೊಂಡಿದ್ದೆ. ಈಗ ಕಾಲ ಕೂಡಿ ಬಂತು ಎಂದರು.
ಇದೇ ಸಂದರ್ಭ ಪ್ರಗತಿ ಶೆಟ್ಟಿ ಮಾತನಾಡಿ, "ದೇವರ ದಯೆಯಿಂದ ಎಲ್ಲವೂ ಇಷ್ಟವರೆಗೆ ಒಳ್ಳೆಯದಾಗಿದೆ" ಎಂದರು.