-->
PUTTUR: ಮುತ್ತಪ್ಪ ರೈ ಸಹೋದರನ ವಿರುದ್ದ ಪ್ರಕರಣ ದಾಖಲು...!!!

PUTTUR: ಮುತ್ತಪ್ಪ ರೈ ಸಹೋದರನ ವಿರುದ್ದ ಪ್ರಕರಣ ದಾಖಲು...!!!



ಪುತ್ತೂರು: ಪುತ್ತೂರಿನ ಪಟಾಕಿ ಗೊಡೌನ್  ನಲ್ಲಿ ಪಟಾಕಿ ಸ್ಫೋಟಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲಕ ಪುತ್ತೂರು ಅಶ್ವಿನಿ ಬಾರ್ & ರೆಸ್ಟೋರೆಂಟ್ ಪಾಲುದಾರ ಕರುಣಾಕರ ರೈ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪೊಲೀಸರು ಸೆಕ್ಷನ್ 9B ಅಡಿ ಸೊಮೋಟೋ ಪ್ರಕರಣ ದಾಖಲಿಸಿದ್ದಾರೆ. 

ಸೆಕ್ಷನ್ 9ಬಿ ಅಡಿ ಕರುಣಾಕರ್ ರೈ ವಿರುದ್ಧ ಸ್ಫೋಟಕ ದಾಸ್ತಾನು ಗಂಭೀರ ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು  ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. 

ಪುತ್ತೂರು ದರ್ಬೆಯ ಅಶ್ವಿನಿ ಹೊಟೆಲ್ ಮಾಲಕರಾದ ಕರುಣಾಕರ ರೈ ಮಾಲಿಕತ್ವದ ದರ್ಬೆಯ  ಆರಾಧ್ಯ ಕಾಂಪ್ಲೆಕ್ಸ್ ನ ನೆಲಮಹಡಿಯಲ್ಲಿದ್ದ ಪಟಾಕಿ ಗೊಡೌನ್ ನಲ್ಲಿ ಶೇಖರಿಸಿಟ್ಟ ಪಟಾಕಿ  ಸಂಜೆ ಸಮಯಕ್ಕೆ  ಸ್ಪೋಟ ಸಂಭವಿಸಿತ್ತು.  

ಪಟಾಕಿ ಸಿಡಿಯುವ ಶಬ್ದಕ್ಕೆ ದರ್ಬೆ ಸುತ್ತಮುತ್ತಲಿನ ಎಲ್ಲರೂ ಬೆಚ್ಚಿಬಿದ್ದಿದ್ರು. ಆ ಕಟ್ಟಡದಲ್ಲಿರುವ ಎಲ್ಲಾ ಅಂಗಡಿಯವರು ಬಂದ್ ಮಾಡಿ ಹೊರ ಬಂದಿದ್ರು.  ದರ್ಬೆಯಲ್ಲಿ ಪಟಾಕಿ ಮಾರುವವರಿಗೆ  ಸೇರಿದ ಪಟಾಕಿ ಎನ್ನಲಾಗಿದೆ. ಆದರೆ ಕರುಣಾಕರ ರೈ ತನ್ನ ಮನೆಯ ಉಪಯೋಗಕ್ಕೆ ಇಟ್ಟ ಪಟಾಕಿ ಎಂದು  ಹೇಳಿಕೆ ನೀಡಿದ್ದರು. ಕಟ್ಟಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಈ ಘಟನೆ ನಡೆದಿದೆಯ ಅಥವ ಬೆಂಕಿ ಆಕಸ್ಮಿಕ ನಡೆದಿದೆಯ ಎನ್ನುವ ಬಗ್ಗೆ ತನಿಖೆಯಿಂದ ತಿಳಿದುಬರಬೇಕಷ್ಟೇ. 


Ads on article

Advertise in articles 1

advertising articles 2

Advertise under the article