.jpeg)
MANGALORE: ಕಿನ್ನಿಗೋಳಿಯಲ್ಲಿ ಭೀಕರ ಅಪಘಾತ; ನಾಲ್ವರು ಗಂಭೀರ
ಕಿನ್ನಿಗೋಳಿ: ಚಾಲಕನ ನಿಯಂತ್ರಣ ತಪ್ಪಿದ ಕಾರು ಮಹಿಳೆಗೆ ಡಿಕ್ಕಿಯಾದ ಘಟನೆ ನಡೆದಿದೆ. ಮಹಿಳೆ ಸಹಿತ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ಕಿನ್ನಿಗೋಳಿ ಮೂಡಬಿದ್ರೆ ರಾಜ್ಯ ಹೆದ್ದಾರಿಯ ಎಂಸಿಸಿ ಬ್ಯಾಂಕ್ ಬಳಿ ನಡೆದಿದ್ದು, ಪಾದಚಾರಿ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಪಕ್ಷಿಕೆರೆ ಕೆಮ್ರಾಲ್ ನಿವಾಸಿ ಜಯಂತಿ ಶೆಟ್ಟಿ (50) ಗಾಯಗೊಂಡ ಮಹಿಳೆ. ಉಳಿದಂತೆ ಕಾರಿನಲ್ಲಿದ್ದ ಚಾಲಕ ತೋಡಾರ್ ನಿವಾಸಿಗಳಾದ ಚಾಲಕ ಕೆ ಹೆಚ್ ಅಬ್ದುಲ್ ಖಾದರ್ (65), ರಿದಾ (16) ಕೌಸರ್ (46) ಹಾಗೂ ಇನ್ನೋರ್ವ ಬಾಲಕಿ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಗಾಯಾಳುಗಳನ್ನು ಕಿನ್ನಿಗೊಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುರತ್ಕಲ್ ಕೃಷ್ಣಾಪುರದಿಂದ ಮೂಡಬಿದ್ರೆಯ ತೋಡಾರ್ ಕಡೆಗೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದೆ. ಅಪಘಾತದ ಭೀಕರ ದೃಶ್ಯ ಸ್ಥಳೀಯ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಹಿಳೆಯು ವಾರದ ಸಂತೆಗೆ ತೆರಳಿ ವಾಪಸ್ ಆಗುತ್ತಿದ್ದುದ್ದಾಗಿ ಸ್ಥಳೀಯರು ತಿಳಿಸಿದ್ದಾರೆ. ಮಂಗಳೂರು ಉತ್ತರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.