ಎಲ್ಲರೂ ಮಲಗಿದ ಮೇಲೆ ಬಾಲಕಿ ಕರೆಸಿಕೊಳ್ಳುತ್ತಿದ್ದ ಮುರುಘಾ; ಚಾರ್ಜ್ ಶೀಟ್ ನಲ್ಲಿ ಮತ್ತಷ್ಟು ಭಯಾನಕ ಬಯಲು!!
ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಸಲ್ಲಿಕೆಯಾದ ಚಾರ್ಜ್ ಶೀಟ್ ನ ಒಂದೊಂದು ಪುಟಗಳು ಸ್ವಾಮೀಜಿಯ ಒಂದೊಂದು 'ಮೃಗೀಯ' ವರ್ತನೆಯನ್ನು ಮುಂದಿಡುತ್ತಿದೆ. ಹಾಸ್ಟೆಲ್ ಸಹಾಯಕರಿಗೆ ಅನುಮಾನವಿದ್ದರೂ ಅವರು, ಕೆಲಸ ಹೋಗುತ್ತೆ ಅನ್ನೋ ಆತಂಕದಲ್ಲಿ ಸುಮ್ಮನಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿತವಾಗಿದೆ.
ಮತ್ತೊಬ್ಬಳು ಯುವತಿಯ ಅನುಭವ
ಹಾಸ್ಟೆಲ್‌ನಲ್ಲಿ ಈ ಹಿಂದೆ ಇದ್ದ ಮತ್ತೊಬ್ಬಾಕೆ ಬಾಲಕಿಯ ಮೇಲೂ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಪೊಲೀಸರ ಎದುರು ನೀಡಿದ ಹೇಳಿಕೆಯಲ್ಲಿ ದೌರ್ಜನ್ಯದ ಸ್ವರೂಪವನ್ನು ಸಂತ್ರಸ್ತೆ ಬಿಚ್ಚಿಟ್ಟಿದ್ದಾರೆ. ತನಿಖೆಯ ಸಂದರ್ಭದಲ್ಲಿ ಕೆಲವರು ನೀಡಿದ ಸುಳಿವಿನ ಆಧಾರದ ಮೇರೆಗೆ ಪೊಲೀಸರು ಸಂತ್ರಸ್ತೆಯನ್ನು ಪತ್ತೆ ಮಾಡಿದ್ದಾರೆ. ಮದುವೆಯಾಗಿ ಕೌಟುಂಬಿಕ ಜೀವನ ನಡೆಸುತ್ತಿರುವ ಸಂತ್ರಸ್ತೆ, ಹಾಸ್ಟೆಲ್‌ನಲ್ಲಿದ್ದ ಸಂದರ್ಭದಲ್ಲಿ ಅನುಭವಿಸಿದ ನರಕ ಯಾತನೆಯನ್ನು ಹೇಳಿಕೊಂಡಿದ್ದಾರೆ.
ಮಲಗಿದ ಮೇಲೆ ಕರೆಸಿಕೊಳ್ಳುತ್ತಿದ್ದ 'ಕಾಮಿ'
ಯುವತಿ ನೀಡಿದ ಹೇಳಿಕೆ ಪ್ರಕಾರ, 'ಎಲ್ಲರೂ ಮಲಗಿದ ಬಳಿಕ ಶರಣರ ಕೊಠಡಿಗೆ ಹಿಂಬಾಗಿಲಿನ ಮೂಲಕ ವಾರ್ಡನ್ ಕಳುಹಿಸುತ್ತಿದ್ದರು. ಹಣ್ಣು ತಿಂದ ನಂತರ ಇಬ್ಬರೂ ಗಂಡ, ಹೆಂಡತಿಯರಂತೆ ಸೇರುತ್ತಿದ್ದೆವು. ನಸುಕಿನ 4.30 ಕ್ಕೆ ಅಲಾರ್ಮ್ ಕೂಗಿದಾಗ ಹಾಸ್ಟೆಲ್‌ಗೆ ಕಳುಹಿಸುತ್ತಿದ್ದರು' ಎಂದು ಸಂತ್ರಸ್ತೆ ತನ್ನ ಭಯಾನಕ ಅನುಭವ ಬಿಚ್ಚಿಟ್ಟಿದ್ದಾಳೆ.
ಸಹಾಯಕರು ಹೇಳುವುದೇನು ಗೊತ್ತಾ!?
ಹಾಸ್ಟೆಲ್ ವಿದ್ಯಾರ್ಥಿನಿಯರನ್ನು ಸ್ವಾಮೀಜಿ ಕೊಠಡಿಗೆ ಕರೆಸಿಕೊಳ್ಳುತ್ತಾರೆ ಎಂಬ ವಿಚಾರವನ್ನು ಮಠಕ್ಕೆ ಬರುವ ಭಕ್ತರು ಮಾತನಾಡಿಕೊಳ್ಳುತ್ತಿದ್ದರಂತೆ. ಈ ಬಗ್ಗೆ ಅಲ್ಲಿನ ಕೆಲಸದಾಳುಗಳಿಗೂ ಅನುಮಾನ ಮೂಡಿತ್ತು. ಆದರೆ, ಕೆಲಸದಿಂದ ವಜಾ ಮಾಡಿದರೆ ಎಂಬ ಆತಂಕದಿಂದ ಸುಮ್ಮನಿದ್ದೆವು ಎಂದು ಶಿವಮೂರ್ತಿ ಮುರುಘಾ ಶರಣರ ಕೊಠಡಿಯ ಸಹಾಯಕರೊಬ್ಬರು ಹೇಳಿಕೆ ನೀಡಿದ್ದಾರೆ. ಇನ್ನೂ ಇಬ್ಬರು ಸಹಾಯಕರು ತನಿಖಾಧಿಕಾರಿ ಎದುರು ಇದೇ ರೀತಿಯ ಹೇಳಿಕೆ ನೀಡಿದ್ದಾರೆ. "ಸ್ವಾಮೀಜಿಯ ಬೆಡ್‌ರೂಂಗೆ ವಾರ್ಡನ್ ವಿದ್ಯಾರ್ಥಿನಿ ಯರೊಂದಿಗೆ ಹೋಗುತ್ತಿದ್ದರು. ಗಂಟೆಗಳ ಕಾಲ ಅಲ್ಲಿದ್ದು, ಮರಳುತ್ತಿದ್ದರು. ಈ ಸಮಯದಲ್ಲಿ ನಾವು ಕೊಠಡಿಗೆ ಹೋಗುವಂತಿರಲಿಲ್ಲ" ಹೇಳಿದ್ದಾಗಿ ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ.