-->
ಚಿಕ್ಕಮಗಳೂರು: ಪಾಕ್ ಫೈನಲ್ ಹೋಗಿದ್ದಕ್ಕೆ ಸಂಭ್ರಮ; ನಾಲ್ವರು ವಶಕ್ಕೆ!

ಚಿಕ್ಕಮಗಳೂರು: ಪಾಕ್ ಫೈನಲ್ ಹೋಗಿದ್ದಕ್ಕೆ ಸಂಭ್ರಮ; ನಾಲ್ವರು ವಶಕ್ಕೆ!


ಚಿಕ್ಕಮಗಳೂರು: ಟಿ20 ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯಾಟದಲ್ಲಿ ನ್ಯೂಜಿಲಾಂಡ್ ತಂಡವನ್ನು ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟ ಪಾಕಿಸ್ತಾನ ತಂಡದ ಪರ ಘೋಷಣೆ ಕೂಗಿದ್ದಕ್ಕೆ ನಾಲ್ವರ ವಿರುದ್ಧ ದೂರು ದಾಖಲಾಗಿದೆ.

ಬಾಳೆಹೊನ್ನೂರಿನ ಹೇರೂರು ಸಮೀಪದ ಹುಲ್ಸೆ ಎಂಬಲ್ಲಿ ಇಬ್ಬರು ಅಸ್ಸಾಂ ಮೂಲದ ಕಾರ್ಮಿಕರು ಬುಧವಾರ ನಡೆದ ಪಂದ್ಯಾಟ ವೀಕ್ಷಣೆಯ ಬಳಿಕ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ. ಇದನ್ನರಿತ ಸಹ ಕಾರ್ಮಿಕರು ಮೇಲುಸ್ತುವಾರಿಯೋರ್ವರಿಗೆ ಮಾಹಿತಿ ನೀಡಿದಾಗ ಅವರು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ನೀಡಿದ್ದಾರೆ.

ದೂರನ್ನು ಸ್ವೀಕರಿಸಿದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಟಿ20 ಸೆಮಿಫೈನಲ್ ನಲ್ಲಿ ಪಾಕಿಸ್ತಾನ ಗೆದ್ದ ಕಾರಣ ನಾವು ಪಾಕ್ ಪರ ಘೋಷಣೆ ಕೂಗಿದ್ದೇವೆ ಬಾಯ್ಬಿಟ್ಟಿದ್ದಾಗಿ ತಿಳಿದು ಬಂದಿದೆ.

ಆಜ್ಮಲ್ ಆಲಿ, ಆಹಿಲ್ ಉದ್ದೀನ್ ಹಾಗೂ ಇನ್ನಿತರ ಇಬ್ಬರು ವಿಚಾರಣೆಗೆ ಒಳಪಟ್ಟವರು. ತನಿಖೆ ಮುಂದುವರೆದಿದೆ ಎನ್ನಲಾಗಿದೆ. 

Ads on article

Advertise in articles 1

advertising articles 2

Advertise under the article