
UDUPI: ಬೈಂದೂರು ಬಿಇಓಗೆ ಅಮಾನತಿನ ಶಿಕ್ಷೆ...!!!
Friday, November 11, 2022
ಉಡುಪಿ: ನವೆಂಬರ್ 7 ರಂದು ಉಡುಪಿಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮಕ್ಕೆ ಜನಸೇರಿಸಿ ಶೈನ್ ಆಗಿದ್ದ ಬಿಇಓಗೆ ಇದೀಗ ಅಮಾನತಿನ ಶಿಕ್ಷೆಯಾಗಿದೆ.
ಹೌದು ಬೈಂದೂರಿನ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಆಗಮಿಸಿದ್ದ ಸಿಎಂ ಬೊಮ್ಮಾಯಿ ಕಾರ್ಯಕ್ರಮಕ್ಕೆ ಸರ್ಕಾರಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಿಎಂ ಸಭೆಗೆ ಹಾಜರಾಗಬೇಕೆಂದು ಬಿಇಓ ಮಂಹುನಾಥ್ ಆದೇಶ ಹೊರಡಿಸಿದ್ದರು. ಇದಕ್ಕೆ ಕಾಂಗ್ರೆಸ್ ಕೂಡ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿತ್ತು.
ಈ ಬಗ್ಗೆ ಮಾಧ್ಯಮಗಳಲ್ಲಿ ಸಿಎಂ ಬಂದ ದಿನವೇ ಸುದ್ದಿ ಪ್ರಸಾರವಾಗಿತ್ತು. ಅಲ್ಲದೆ ಬಿಇಓ ಆದೇಶದ ಪ್ರತಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಸಿಎಂ ಕಾರ್ಯಕ್ರಮ ಮುಗಿದ ಬೆನ್ನಲ್ಲೇ ಬೈಂದೂರು ಬಿಇಓ ಮಂಜಯನಾಥ್ ಗೆ ಅಮಾನತಿ ಶಿಕ್ಷೆ ನೀಡಲಾಗಿದೆ.