
ಪ್ರವೀಣ್ ನೆಟ್ಟಾರ್ ಹತ್ಯೆ ಕೇಸ್ | ಮತ್ತೋರ್ವ ಆರೋಪಿ ಬಂಧಿಸಿದ NIA
Saturday, November 12, 2022
ಮಂಗಳೂರು: ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ಮತ್ತೋರ್ವ ಆರೋಪಿಯನ್ನು NIA ತಂಡ ಬಂಧಿಸಿದೆ.
ಇಂದು ದಾಳಿ ನಡೆಸಿದ NIA ಅಧಿಕಾರಿಗಳು ಬೆಳ್ಳಾರೆಯ ನಿವಾಸಿ ಶಾಹಿದ್ (40) ಎಂಬಾತನನ್ನು ಬಂಧಿಸಿದ್ದಾರೆ.
ಕಾನೂನು ಪ್ರಕ್ರಿಯೆ ನಂತರ ಆರೋಪಿಯನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆದೊಯ್ದಿದ್ದಾಗಿ NIA ಮೂಲಗಳು ತಿಳಿಸಿವೆ.
ಬಂಧಿತ ಶಾಹಿದ್ SDPI ಮುಖಂಡರಾದ ಇಕ್ಬಾಲ್ ಹಾಗೂ ಶಾಫಿ ಬೆಳ್ಳಾರೆಯ ತಂಗಿಯ ಗಂಡ ಎಂದು ತಿಳಿದು ಬಂದಿದೆ.