ನಿಷೇಧಿತ ಸಿಎಫ್ಐ ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತ ಅರೆಸ್ಟ್
Saturday, November 12, 2022
ಬೆಂಗಳೂರು: ನಿಷೇಧಿತ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತನೋರ್ವನನ್ನು ಅಸ್ಸಾಂ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಅಮೀರ್ ಹಮ್ಜಾ (27) ಬಂಧಿತ ಸಿಎಫ್ಐ ಕಾರ್ಯಕರ್ತ. ಈತ ಮೂಲತಃ ಅಸ್ಸಾಂ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಬಂಧಿತನನ್ನು ಪಶ್ಚಿಮ ಅಸ್ಸಾಂನ ಬಕ್ಸಾ ಜಿಲ್ಲೆಯ ಆನಂದ ನಗರ ಪ್ರದೇಶದ ನಿವಾಸಿಯಾಗಿದ್ದಾನೆ. ವಿದ್ಯಾರ್ಥಿ ಸಂಘಟನೆ ಸಿಎಫ್ಐ ನಲ್ಲಿ ಸಕ್ರಿಯ ನಾಯಕನಾಗಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ.
ಅಸ್ಸಾಂ ಪೊಲೀಸರು ಬೆಂಗಳೂರು ಪೊಲೀಸರ ಸಹಾಯದಿಂದ ಈತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ ಎನ್ನಲಾಗಿದೆ. ಬಂಧಿತನ ವಿರುದ್ಧ ಅಸ್ಸಾಂ ಪೊಲೀಸರು UAPA ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.