SULYA: ಗೋಣಿಚೀಲದಲ್ಲಿ ಯುವತಿಯ ಮೃತದೇಹ...!!!
ಸುಳ್ಯ: ಸುಳ್ಯ ತಾಲೂಕಿನ ಬೀರಮಂಗಲದ ಮನೆಯೊಂದರಲ್ಲಿ ಯುವತಿಯ ಮೃತದೇಹ ಗೋಣಿ ಚೀಲದೊಳಗೆ ಪತ್ತೆಯಾಗಿದೆ. ಆದ್ರೆ ಆಕೆಯ ಪತಿ ನಾಪತ್ತೆಯಾಗಿರುವುದು ಈ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿದೆ. ಹಾಗಾಗಿ ಪತಿ ಪತ್ನಿಯನ್ನ ಕೊಂದು ಗೋಣಿಚೀಲದಲ್ಲಿ ತುಂಬಿಸಿರಬಹುದು ಅಂತ ಸಂಶಯಿಸಲಾಗಿದೆ.
ಸುಳ್ಯದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಇಮ್ರಾನ್ ಪರಾರಿಯಾಗಿರುವಂತ ವ್ಯಕ್ತಿಯಾಗಿದ್ದಾನೆ. ಈತ ಮೃತ ಮಹಿಳೆಯ ಪತಿ ಎಂದು ಗುರುತಿಸಲಾಗಿದೆ. ಇಮ್ರಾನ್ ಕಳೆದ ಆರು ತಿಂಗಳಿನಿಂದ ಬೀರಮಂಗಲದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಅಲ್ಲದೆ ಎರಡು ದಿನಗಳ ಹಿಂದೆ ಈತ ಊರಿಗೆ ತೆರಳುವುದಾಗಿ ತಾನು ಕೆಲಸಕ್ಕಿದ್ದ ಹೋಟಲ್ ನವರಲ್ಲಿ ತಿಳಿಸಿದ್ದಾನೆ. ಆದ್ರೆ ಇಮ್ರಾನ್ ಹೋಗುವಾಗ ಪತ್ನಿಯನ್ನು ಜತೆಗೆ ಕರೆದುಕೊಂಡು ಹೋಗಿಲ್ಲ. ಈ ಕಾರಣದಿಂದಾಗಿ ಸ್ಥಳೀಯರಿಗೆ ಈತನ ಮೇಲೆ ಸಂಶಯ ಉಂಟಾಗಿದೆ.
ಇನ್ನು ಕಳೆದ ಎರಡು ದಿನಗಳ ಹಿಂದೆ ಜೋರಾಗಿ ಕಿರುಚಾಡಿದ ಶಬ್ಧ ಮನೆಯ ಒಳಗಿನಿಂದ ಕೇಳಿಸಿದ್ದಾಗಿ ಸ್ಥಳೀಯರು ಹೇಳಿದ್ದಾರೆ. ಘಟನೆ ಬಗ್ಗೆ ಸುಳ್ಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.