-->
Mangaluru: ಉಗ್ರರಿಗೆ ನೆರವು ಆರೋಪ; ವಕೀಲರ ಹೆಸರು ಬಹಿರಂಗ ಪಡಿಸಲು ದಿನೇಶ್ ಹೆಗ್ಡೆ ಉಳೆಪಾಡಿ ಒತ್ತಾಯ

Mangaluru: ಉಗ್ರರಿಗೆ ನೆರವು ಆರೋಪ; ವಕೀಲರ ಹೆಸರು ಬಹಿರಂಗ ಪಡಿಸಲು ದಿನೇಶ್ ಹೆಗ್ಡೆ ಉಳೆಪಾಡಿ ಒತ್ತಾಯ

 


ಮಂಗಳೂರು: ಖಾಸಗಿ ಸುದ್ದಿ ವಾಹಿನಿ ಚರ್ಚಾ ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಜಯಂತ್ ಶೆಟ್ಟಿ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆಯೊಂದಕ್ಕೆ ಖ್ಯಾತ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಚಕಾರ ಎತ್ತಿದ್ದಾರೆ.

ಚರ್ಚಾ ಕಾರ್ಯಕ್ರಮದಲ್ಲಿ ಜಯಂತ್ ಶೆಟ್ಟಿ ಅವರು, "1998 ರಲ್ಲಿ ಕೊಯಮತ್ತೂರಿನಲ್ಲಿ ಉಗ್ರವಾದಿಗಳು ಬಾಂಬ್ ಬ್ಲಾಸ್ಟ್ ಮಾಡಿ 60  ಮಂದಿ ಸತ್ತಿದ್ದಾರೆ. ಪ್ರಕರಣದಲ್ಲಿ ಬಾಂಬ್ ಸ್ಪೋಟಿಸಿದ್ದ ನಾಲ್ಕು ಮಂದಿ ಆರೋಪಿಗಳನ್ನು ಮಂಗಳೂರಿನ ಹೊರವಲಯದಲ್ಲಿ ಅರೆಸ್ಟ್ ಮಾಡಲಾಗಿತ್ತು. ಅವತ್ತು ಅವರಿಗೆ ಮಂಗಳೂರಿನ ಹೊರ ವಲಯದಲ್ಲಿ ಮನೆ ಮಾಡಿ ಆಶ್ರಯ ಕೊಟ್ಟವರು ಮಂಗಳೂರಿನ ವಕೀಲರು. ಇದು CBI  ತನಿಖೆಯಲ್ಲೂ ಹೊರ ಬಂದಿದೆ " ಎಂದಿದ್ದಾರೆ.

ಜೊತೆಗೆ ಇನ್ನೋರ್ವ ಅತಿಥಿ ಇದಕ್ಕೆ ಧ್ವನಿಗೂಡಿಸುತ್ತಾ "ಕೊಯಮುತ್ತೂರು ಬ್ಲಾಸ್ಟ್ ಮತ್ತು ಬ್ಲಾಸ್ಟ್ ಗೆ ಸಾಮ್ಯತೆ ಇದೆ" ಎಂದಿದ್ದಾರೆ ಎನ್ನಲಾಗಿದೆ.

ಈ ಕುರಿತಾಗಿ ಪ್ರತಿಕ್ರಿಯಿಸಿರುವ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ, ಕೊಯಮತ್ತೂರು ಪ್ರಕರಣದಲ್ಲಿ ಬಾಂಬ್ ತಯಾರು ಮಾಡಿದ್ದು ಮಂಗಳೂರಿನಲ್ಲಿ ಎಂದು ಹೇಳಲಾಗುತ್ತಿದೆ. ಅಂತಹವರಿಗೆ ಮಂಗಳೂರಿನಲ್ಲಿ ವಕೀಲರು ಆಶ್ರಯ ನೀಡಿದ್ದಾರೆ ಎನ್ನಲಾಗುತ್ತಿದೆ. ಹಾಗಿದ್ರೆ ಕೊಯಮತ್ತೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಘಟನೆಯ ಪೂರ್ವ ಮತ್ತು ನಂತರ ಉಗ್ರರಿಗೆ ಆಶ್ರಯ ನೀಡಿದ್ದ ಮಂಗಳೂರಿನ ಆ ವಕೀಲರು ಯಾರು? ಸಮಯ ಇದೇ ಜಯಂತ್ ಶೆಟ್ಟಿ ಯವರು ಉನ್ನತ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಅವರು ವಕೀಲರನ್ನು ಯಾಕೆ ಅರೆಸ್ಟ್ ಮಾಡಲಿಲ್ಲ? ಪೊಲೀಸರು ವಕೀಲರೊಂದಿಗೆ ಕೈ ಜೋಡಿಸಿಕೊಂಡಿದ್ದರೇ ಅನ್ನುವ ಸಂಶಯ ಬರುತ್ತಿದೆ ಎಂದಿದ್ದಾರೆ.

ಪ್ರಕರಣದಲ್ಲೂ ವಕೀಲರ ಕೈವಾಡ ಇದ್ದೀರಬಹುದೇ ಎಂಬ ಸಂಶಯವೂ ಬರುತ್ತಿದೆ. ಜಯಂತ್ ಶೆಟ್ಟಿಯವರು ವಕೀಲರ ಹೆಸರನ್ನು ಪ್ರಸ್ತುತ ತನಿಖೆ ಮಾಡುತ್ತಿರುವ ಪೊಲೀಸರಿಗೆ ನೀಡಬೇಕು ಮತ್ತು ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕು. ಅಂತಹ ವಕೀಲರು ನ್ಯಾಯಾಲಯದಲ್ಲಿ ಕೆಲಸ ಮಾಡಲು ಮತ್ತು ವಕೀಲರಾಗಿ ಮುಂದುವರಿಯಲು ಅನರ್ಹರು ಎಂದಿದ್ದಾರೆ.

ಅಲ್ಲದೇ, ಈ ವಿಚಾರವನ್ನು ಕರಾವಳಿಯ ಶಾಂತಿಗಾಗಿ ಸಾರ್ವಜನಿಕರು ಪ್ರಶ್ನಿಸಬೇಕು ಎಂದು ದಿನೇಶ್ ಹೆಗಡೆ ಉಳೆಪಾಡಿ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article