Mangaluru : ಆಟೋ ಬ್ಲಾಸ್ಟ್; ಮುಗಿಯದ ಟೆನ್ಶನ್; ಶಾರಿಕ್ ಜೊತೆಗಿದ್ದ ಇನ್ನೊಬ್ಬ ಮಿಸ್ಸಿಂಗ್!!?
ಮಂಗಳೂರು: ಶಂಕಿತ ಉಗ್ರ ಮಂಗಳೂರಿಗೆ ಆಗಮಿಸಿರುವ ರೂಟ್ ಮ್ಯಾಪ್ ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ಪಡೀಲ್ ಬಸ್ ನಿಲ್ದಾಣದಲ್ಲಿ ಬಸ್ ಇಳಿದು ನಾಗುರಿಗೆ ನಡೆದುಕೊಂಡು ಹೋಗಿದ್ದ ಶಾರಿಕ್ ಜೊತೆ ಇನ್ನೊಬ್ಬನಿದ್ದಾನೆ ಅನ್ನೋ ಮಾಹಿತಿ ಲಭಿಸುತ್ತಿದೆ. ಪಡೀಲ್ ವೈನ್ ಶಾಪ್ ವೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯದಲ್ಲಿ ಬ್ಯಾಗ್ ಜೊತೆ ಕಾಣಿಸಿಕೊಂಡಿರುವ ಶಾರಿಕ್, ತಲೆಗೆ ಕ್ಯಾಪ್ ಧರಿಸಿದ್ದು ಕಂಡು ಬಂದಿದೆ. ಪೊಲೀಸರು ಇದು ಶಾರಿಕ್ ಎಂದು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಶಾರಿಕ್ ಜೊತೆಗಿದ್ದನೇ ಇನ್ನೊಬ್ಬ..!?
ಸಿಸಿಟಿವಿ ದೃಶ್ಯದಲ್ಲಿ ದಾಖಲಾದ ವೀಡಿಯೋದಲ್ಲಿ ಶಾರಿಕ್ ಜೊತೆಗೆ ಇನ್ನೊಬ್ಬನಿದ್ದನೇ ಅನ್ನೋ ಸಂಶಯ ಪೊಲೀಸರಿಗೆ ವ್ಯಕ್ತವಾಗಿದೆ. ಸ್ಥಳೀಯ ಅಂಗಡಿಗೆ ತೆರಳಿದ್ದ ವೇಳೆ ಈತನ ಜೊತೆಗೆ ಇನ್ನೊಬ್ಬನಿದ್ದು ಆತ ಕೂಡಾ ಬ್ಯಾಗ್ ಹಾಗೂ ಕೈಚೀಲ ಹೊಂದಿದ್ದನು. ಆದರೆ, ಈತ ಯಾರು? ಶಾರಿಕ್ ಜೊತೆಗೆ ಬಂದವನೇ? ಅನ್ನೋ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಆತನ ಪತ್ತೆಗಾಗಿ ಮುಂದಾಗಿದ್ದಾರೆ.