-->
BELTHANGADY: ಬೆಳ್ತಂಗಡಿಯ ಗಡಾಯಿಕಲ್ಲಿನಲ್ಲಿ ಹಗಲು ದರೋಡೆ...!!!

BELTHANGADY: ಬೆಳ್ತಂಗಡಿಯ ಗಡಾಯಿಕಲ್ಲಿನಲ್ಲಿ ಹಗಲು ದರೋಡೆ...!!!



ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ತಾಲೂಕಿಗೆ ಮುಕುಟಪ್ರಾಯದಂತಿರುವ ನಡ ಗ್ರಾಮದ ನರಸಿಂಹ ಗಡ ಗಡಾಯಿಕಲ್ಲು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ದಿನದಿಂದ ದಿನೇ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಅಷ್ಟಿಷ್ಟಲ್ಲ. ಇದು ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯೊಳಗೆ ಬರುವುದರಿಂದ ಬರುವ ಪ್ರವಾಸಿಗರಿಗೆ ಮಕ್ಕಳಿಗೆ 25 ದೊಡ್ಡವರಿಗೆ 50 ರೂ ವನ್ಯಜೀವಿ  ಇಲಾಖೆ ನಿಗದಿ ಪಡಿಸಿದೆ. ಅದರೆ ಇಲ್ಲಿ ಮಾತ್ರ ಹಣದ ಅವ್ಯವಹಾರ ನಡೆಯುತ್ತಿದೆ ಎಂದು ಸಾರ್ವಜನಿಕರು ಹಾಗೂ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರವಾಸಿಗರು ಎಷ್ಟು ಬಂದರೂ ಬೆರಳೆಣಿಕೆಯ ಲೆಕ್ಕಚಾರ ಮಾತ್ರ ಸರ್ಕಾರಕ್ಕೆ ನೀಡಲಾಗುತ್ತಿದೆ. ಉಳಿದಂತೆ ಹಣವನ್ನು ಇಲ್ಲಿ ಇರುವ ಅಧಿಕಾರಿಗಳು ಜೇಬಿಗಿಳಿಸಿಕೊಳ್ಳುತ್ತಿದ್ದಾರೆ.



ಅದಲ್ಲದೆ ಯಾವುದೇ ಮೂಲಭೂತ ಸೌಕರ್ಯ ಇಲ್ಲ ಇದರಿಂದ ಪ್ರವಾಸಿಗರಿಗೆ ಅದರಲ್ಲೂ ಮಹಿಳೆಯರಿಗೆ ತೊಂದರೆಯಾಗುತ್ತಿದೆ.  ಸಮರ್ಪಕವಾದ ಶೌಚಾಲಯ ಕುಡಿಯುವ ನೀರು ಇಲ್ಲ ಇದರ ಬಗ್ಗೆ ತಲೆಕೆಡಿಸದ ಇಲಾಖೆ ದುಡ್ಡು ಮಾತ್ರ ಸಾರ್ವಜನಿಕರಿಂದ ವಸೂಲಿ ಮಾಡುತ್ತಿದೆ. ಅದರಲ್ಲೂ ಸರ್ಕಾರಕ್ಕೆ ವಂಚಿಸಿ ನೆಟ್ ವರ್ಕ್ ಸರಿಯಿಲ್ಲ ಎಂದು ಸುಳ್ಳು ಹೇಳಿ ಅನ್ ಲೈನ್ ರಶೀದಿ ನೀಡದೇ ಪ್ರವಾಸಿರಿಗೆ ಮೋಸ ಮಾಡಲಾಗುತ್ತಿದೆ.



ಈ ಬಗ್ಗೆ ಪ್ರಶ್ನಿಸಿದರೆ ವನ್ಯಜೀವಿ ಇಲಾಖೆಯ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಭಾನುವಾರ ರಶೀದಿ ನೀಡದೆ ಹಣ ಪಡೆಯುತ್ತಿರುವ ಮಾಹಿತಿ ಊರಿನವರಿಗೆ ಸಿಕ್ಕಿದ್ದು ತಕ್ಷಣ 50 ಕ್ಕೂ ಅಧಿಕ ಮಂದಿ ಸ್ಥಳಕ್ಕೆ ಜಮಾಯಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಇದರ ಬಗ್ಗೆ ಮಾಹಿತಿ ಪಡೆದುಕೊಂಡ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸ್ಥಳಕ್ಕೆ ದೌಡಾಯಿಸಿ ಪ್ರವಾಸಿಗರೊಂದಿಗೆ ಹಾಗೂ ಊರವರ ಜೊತೆ ಮಾತುಕತೆ ಮಾಡಿ ಪರಿಶೀಲಿಸಿದಾಗ ಮೇಲ್ನೊಟ್ಟಕೆ ಅವ್ಯವಹಾರ ಕಂಡು ಬಂದ ಹಿನ್ನೆಲೆಯಲ್ಲಿ ವನ್ಯಜೀವಿ ಮೇಲಾಧಿಕಾರಿಗಳಿಗೆ ಸ್ಥಳದಿಂದಲ್ಲೇ ಪೋನ್‌ ಮೂಲಕ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡು ಬರುವಂತಹ ಪ್ರವಾಸಿಗರಿಗೆ ಯಾವುದೇ ರೀತಿಯಲ್ಲೂ ಸಮಸ್ಯೆ ಆಗಬಾರದು ವಸೂಲಿ ದಂಧೆ ಹಾಗೂ ಸರ್ಕಾರಕ್ಕೆ ವಂಚಿಸುವ ತಪಿತಸ್ಥ ಅಧಿಕಾರಿಗಳ ವಿರುದ್ಧ  ಸರಿಯಾದ ಕ್ರಮ ಕೈಗೊಂಡು ಅಂತಹ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಆಗ್ರಹಿಸಿದರಲ್ಲದೇ ಸ್ಥಳಕ್ಕೆ ತಕ್ಷಣ ಬಂದು ಪರಿಶೀಲಿಸುವಂತೆ ಸೂಚನೆ ನೀಡಿದರು. 



 

ಈ ಬಗ್ಗೆ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ವಲಯ ವನ್ಯಜೀವಿ ಆರ್‌.ಎಫ್‌.ಓ ಸ್ವಾತಿ ಅವರು ಪರಿಶೀಲಿಸಿದಾಗ ಅಧಿಕಾರಿಗಳು ತಪ್ಪು ಎಸಗಿರುವುದು ಕಂಡು ಬಂದಿದೆ. ಅದಲ್ಲದೇ ಬಂದ ಪ್ರವಾಸಿಗರು ದುಡ್ಡು ಪಡೆದುಕೊಂಡಿದ್ದಾರೆ ಯಾವುದೇ ರಶೀದಿ ನೀಡಲಿಲ್ಲ ಎಂದು ತಿಳಿದುಬಂದಿದೆ. ನಾನು ಬೆಳ್ತಂಗಡಿಗೆ ಬಂದು ಮೂರು ತಿಂಗಳಾಗಿದ್ದು, ಅದಲ್ಲದೆ ಇಲಾಖೆಯ ಕರ್ತವ್ಯ ನಿಮಿತ್ತ ಬೆಂಗಳೂರಿಗೆ ಹೋಗುವಾಗ ಬಸ್ ಅಪಘಾತದಲ್ಲಿ ಕಾಲು ಮುರಿದು ಒಂದು ತಿಂಗಳು ಚಿಕಿತ್ಸೆಯಲ್ಲಿದ್ದು, ಇತ್ತಿಚೆಗೆ ಕರ್ತವ್ಯಕ್ಕೆ ಬಂದಿದ್ದಾರೆ. ಸಾಪ್ಟ್ ವೇರ್ ವ್ಯವಸ್ಥೆ ಅನ್ ಲೈನ್ ಟಿಕೆಟ್ ನಿಯಮ ಒಂದು ತಿಂಗಳಿಂದ ಸುರುವಾಗಿದ್ದು, ಇದರಲ್ಲಿ ಇನ್ನೂ ಹೊಸ ನಿಯಮ ಮಾಡಿ ಹಿರಿಯ ಅಧಿಕಾರಿಗಳೊಂದಿಗೆ ಮಾತಾನಾಡುತ್ತೇವೆ. ಅದಲ್ಲದೆ ಸ್ಥಳದಲ್ಲೇ ಪ್ರವಾಸಿಗರಿಂದ ಘಟನೆಯ ಬಗ್ಗೆ ದೂರು ಬರೆಸಿದಕೊಂಡು ಕ್ರಮ ಕೈಗೊಳ್ಳುವುದಾಗಿ ಮಾಧ್ಯಮಗಳಿಗೆ ಆರ್.ಎಫ್.ಓ ಸ್ವಾತಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article