Mangaluru: ನಿಷೇಧಿತ ಪಿಎಫ್ಐ ಸಂಘಟನೆ ಜೊತೆಗಿತ್ತೇ ಶಾರೀಕ್ ಗೆ ನಂಟು!?; ಬಾಂಬ್ ಬ್ಲಾಸ್ಟ್ ಹಿಂದೆ ಬಿಗ್ ಅಜೆಂಡಾ!?
ಮಂಗಳೂರು: ಆಟೋ ಬ್ಲಾಸ್ಟ್ ಪ್ರಕರಣದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿರುವ ಶಂಕಿತ ಉಗ್ರ ಶಾರೀಕ್ ಗೆ ನಿಷೇಧಿತ ಪಿಎಫ್ಐ ಸಂಘಟನೆ ಜೊತೆ ನಂಟಿದೆ. ಈ ಕುರಿತು ಪೊಲೀಸ್ ತನಿಖೆಯಿಂದ ತಿಳಿದು ಬಂದಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಸಾಕ್ಷ್ಯ ಕಲೆ ಹಾಕುತ್ತಿದ್ದಾರೆ.
ಪಾಪ್ಯುಲರ್
ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಸೆಪ್ಟಂಬರ್ 28ರಂದು ಅಧಿಕೃತವಾಗಿ ಕೇಂದ್ರ ಸರಕಾರವು ಯುಎಪಿಎ
ಕಾಯ್ದೆಯಡಿ ಐದು ವರ್ಷಗಳ ಕಾಲ ನಿಷೇಧಿಸಿದೆ.
ತಮಿಳುನಾಡಿನ
ಕೊಯಮತ್ತೂರಿನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲೂ ಶಾರೀಕ್ ಹೆಸರು
ಕೇಳಿ ಬಂದಿದ್ದು, ಕೃತ್ಯ ನಡೆಸಲು ಅಲ್ಲಿನ ಸ್ಥಳೀಯ ಪಿಎಫ್ಐ ನಾಯಕರು ಸಾಥ್ ನೀಡಿದ್ದಾಗಿ ಹೇಳಲಾಗುತ್ತಿದೆ.
ಈ ಕುರಿತಾಗಿ ತಮಿಳುನಾಡು ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಹೇಳಲಾಗುತ್ತಿದೆ.
ಅಕ್ಟೋಬರ್
23 ರಂದು ಕೊಯಮತ್ತೂರಿನ ಸಂಗಮೇಶ್ವರ ದೇವಸ್ಥಾನ ಬಳಿಯ ಕಾರ್ ಬಾಂಬ್ ಸ್ಪೋಟ ನಡೆದಿತ್ತು. ಇದರ ಮಾಸ್ಟರ್ ಮೈಂಡ್
ಮತೀನ್ ಇನ್ನೂ ತಲೆಮರೆಸಿಕೊಂಡಿದ್ದು, ರಾಷ್ಟ್ರೀಯ ತನಿಖಾ ದಳ (ಎನ್ಐಎ) ಆತನ ತಲೆಗೆ ಬಹುಮಾನ ಘೋಷಿಸಿದೆ.
ಈ ಪ್ರಕರಣದಲ್ಲಿ ಶಾರೀಕ್ ಕೂಡಾ ಭಾಗಿಯಾಗಿದ್ದು,
ಕೊಯಮತ್ತೂರಿನಲ್ಲಿ ಕೆಲ
ಮಾಜಿ ಪಿಎಫ್ ಐ ನಾಯಕರನ್ನ ಭೇಟಿಯಾಗಿದ್ದಾಗಿ
ಅಂದಾಜಿಸಲಾಗಿದೆ.
ಜೊತೆಗೆ 1998 ರ ಕೊಯಮತ್ತೂರು ಬಾಂಬ್ ಬ್ಲಾಸ್ಟ್ ರೂವಾರಿಯ ಸಂಬಂಧಿಯನ್ನ ಈತ ಭೇಟಿಯಾಗಿದ್ದಾಗಿ ಹೇಳಲಾಗುತ್ತಿದ್ದು, ಬಾಂಬ್ ಬ್ಲಾಸ್ಟ್ ರೂವಾರಿ ಎಸ್.ಎ.ಬಾಷಾ ಸಂಬಂಧಿ ಮುಹಮ್ಮದ್ ತಲ್ಕ ಭೇಟಿ ಶಂಕೆ ವ್ಯಕ್ತಪಡಿಸಿದ್ದಾರೆ.