NITK Tollgate | ಸುರತ್ಕಲ್ ಟೋಲ್ ಗೇಟ್ ರದ್ದು; ಹೋರಾಟಕ್ಕೆ ಸಂದ ಜಯ!?
Monday, November 14, 2022
ಮಂಗಳೂರು: ಸುರತ್ಕಲ್ ಟೋಲ್ ಗೇಟ್ ರದ್ದು ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದು, ಕೇಂದ್ರ ಸರಕಾರವು ಟೋಲ್ ಸಂಗ್ರಹ ರದ್ದು ಮಾಡಿದ್ದಾಗಿ ತಿಳಿಸಿದ್ದಾರೆ.
ಸುರತ್ಕಲ್ ಟೋಲ್ ಗೇಟ್ ತೆರವು ಮಾಡಬೇಕೆಂದು ಟೋಲ್ ವಿರೋಧಿ ಹೋರಾಟ ಸಮಿತಿ ಧರಣಿ ನಡೆಸುತ್ತಿರುವ ಮಧ್ಯೆಯೇ ಇದೀಗ ಟೋಲ್ ಸುಂಕ ವಸೂಲಿ ರದ್ದಾಗಿದೆ ಎಂದು ನಳಿನ್ ಕುಮಾರ್ ತಿಳಿಸಿದ್ದಾರೆ.
ತಾಂತ್ರಿಕ ಅಂಶಗಳ ಕಾರಣ ಟೋಲ್ ರದ್ದು ತಡವಾಗಿತ್ತು. ಇದೀಗ ಟೋಲ್ ತೆರವಿನ ತಾಂತ್ರಿಕ ಅಂಶ ಪೂರ್ಣವಾಗಿರುವ ಬಗ್ಗೆ ತಿಳಿಸಿರುವ ಸಂಸದರು, ಪ್ರಧಾನಿ ಮೋದಿ ಹಾಗೂ ಸಾರಿಗೆ ಸಚಿವರಿಗೆ ಧನ್ಯವಾದ ತಿಳಿಸಿದ್ದಾರೆ.
