
MANGALORE: ಭಯ ಬೇಡ; ಎಚ್ಚೆತ್ತುಕೊಳ್ಳಿ...
Monday, November 14, 2022
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಭಾಗಗಳಲ್ಲಿ ಕೆಂಗಣ್ಣಿನ ಸಮಸ್ಯೆ ಕಂಡು ಬಂದಿದ್ದು ಮಕ್ಕಳು ಇದರಿಂದ ಎಚ್ಚೆತ್ತುಕೊಳ್ಳಬೇಕಿದೆ. ಹಾಗಾಗಿ ಒಂದು ವೇಳೆ ಮಕ್ಕಳು ಕೆಂಗಣ್ಣಿನ ಕಾಯಿಲೆಯಿಂದ ಬಳಲುತ್ತಿದ್ದರೆ ವಾಸಿಯಾಗುವ ವರೆಗೆ ಶಾಲೆಗೆ ಕಳುಹಿಸದೇ ಇರುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆಯು ಪೋಷಕರಿಗೆ ಸೂಚಿಸಿದೆ.
ಕೆಂಗಣ್ಣು ಇದು ಸಾಂಕ್ರಾಮಿಕ ಕಾಯಿಲೆ ಮತ್ತು ಅತ್ಯಂತ ವೇಗವಾಗಿ ಹರಡುತ್ತದೆ. ಹಾಗಾಗಿ ಮಕ್ಕಳಲ್ಲಿ ಈ ಕಾಯಿಲೆ ಕಂಡುಬಂದರೆ ಕನಿಷ್ಠ 5 ದಿನ ಶಾಲೆಗೆ ಕಳುಹಿಸದೇ ಇರುವಂತೆ ಪಾಲಕರಿಗೆ ಸೂಚಿಸಬೇಕು ಎಂದು ಶಾಲಾ ಮುಖ್ಯಸ್ಥರಿಗೆ ತಿಳಿಸಲಾಗಿದೆ.
ಜೊತೆಗೆ ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಜೊತೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.