.jpeg)
Mangaluru: ಇದೊಂದು ಪಕ್ಕಾ ಪ್ರೀಪ್ಲ್ಯಾನ್ಡ್ ಉಗ್ರ ಕೃತ್ಯ; ಕುಕ್ಕರ್ ಬಾಂಬ್ ಸ್ಫೋಟಕ್ಕೆ ಡಿಜಿಪಿ ರಿಯಾಕ್ಟ್
Sunday, November 20, 2022
ಮಂಗಳೂರು: ನಾಗುರಿಯಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಮಾಡಿರುವ ರಾಜ್ಯ ಡಿಜಿಪಿ ಪ್ರವೀಣ್ ಸೂದ್, ಇದೊಂದು ಆಕಸ್ಮಿಕ ಘಟನೆಯಲ್ಲ. ಉದ್ದೇಶಿತ ಉಗ್ರ ಕೃತ್ಯ ಎಂದಿದ್ದಾರೆ.
ಉಗ್ರ ಕೃತ್ಯದ ಮೂಲಕ ಹೆಚ್ಚಿನ ಹಾನಿ ಉಂಟು ಮಾಡುವುದು ಉದ್ದೇಶ ಹೊಂದಿದ್ದರು. ಇದನ್ನು ಕೇಂದ್ರ ತನಿಖಾ ತಂಡದ ಜೊತೆಗೆ ರಾಜ್ಯ ಪೊಲೀಸ್ ಇಲಾಖೆಯೂ ತೀವ್ರ ತನಿಖೆ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಘಟನೆಯಲ್ಲಿ ಸದ್ಯ ಆಟೋ ಚಾಲಕ ಮತ್ತು ಪ್ರಯಾಣಿಕ ನೋರ್ವ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.