
Mangaluru: ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಕ್ಕೆ ಟ್ವಿಸ್ಟ್; ತುಂಗಾ ನದಿ ಸ್ಫೋಟದ ಆರೋಪಿ ಶಾರಿಕ್ ಕೃತ್ಯ!?
ಮಂಗಳೂರು: ಮಂಗಳೂರು ಆಟೋ ಸ್ಫೋಟ ಪ್ರಕರಣದ 'ಬಾಂಬ್ ಪ್ಲಾಂಟ್' ಮಾಡಲು ಬಂದಿದ್ದ ವ್ಯಕ್ತಿ ಶಾರೀಕ್ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶಿವಮೊಗ್ಗದ ತುಂಗಾ ನದಿ ದಡದ ಸ್ಫೋಟ ಪ್ರಕರಣದ ಎ1 ಆರೋಪಿಯಾಗಿರುವ ಶಾರಿಕ್ ಈ ಕೃತ್ಯದ ಹಿಂದಿನ ರೂವಾರಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈತ ಮೈಸೂರಿನಿಂದ ಬಾಂಬ್ ತಯಾರಿಸಿ ತಂದಿದ್ದ ವ್ಯಕ್ತಿ ಎನ್ನಲಾಗಿದೆ.
ಮೈಸೂರಿನಿಂದ ಬಸ್ ಮೂಲಕ ಮಂಗಳೂರು ತಲುಪಿದ್ದ ಶಂಕಿತ ಆರೋಪಿ, ಮಂಗಳೂರು ಹೊರವಲಯದ ಪಡೀಲ್ ನಲ್ಲಿ ಬಸ್ ಇಳಿದು ಪಂಪ್ ವೆಲ್ ಕಡೆ ನಡೆದಿದ್ದ. ಪಡೀಲ್ ನಲ್ಲಿ ಬಸ್ ಇಳಿದು ನಡೆದು ಕೊಂಡೇ ಪಂಪ್ ವೆಲ್ ನತ್ತ ಸಾಗಿದ್ದ ಈತ ಬಳಿಕ, ರಸ್ತೆ ಮದ್ಯೆ ಆಟೋ ಹತ್ತಿದ್ದ ಎನ್ನಲಾಗಿದೆ.
ಶಂಕಿತ ಉಗ್ರ 3 ಶರ್ಟ್ ಹಾಕಿ ಕೊಂಡು ಬಂದಿದ್ದ ಎನ್ನಲಾಗಿದೆ. ಆಟೋದಲ್ಲಿ ಅಚಾನಕ್ ಆಗಿ ಸ್ಪೋಟ ಸಂಭವಿಸಿ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ.
ಈತ ಯಾವ ಉದ್ದೇಶಕ್ಕಾಗಿ ಬಾಂಬ್ ತಂದಿದ್ದ, ಎಲ್ಲಿ ಬ್ಲಾಸ್ಟ್ ಮಾಡುವ ಉದ್ದೇಶ ಹೊಂದಿದ್ದ ಅನ್ನೋದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಈತನ ಸಹಚರರಾದ ಮಾಝ್ ಮುನೀರ್ ಹಾಗೂ ಯಾಸಿನ್ ಎಂಬಿಬ್ಬರು ಯುವಕರನ್ನು ಅರೆಸ್ಟ್ ಮಾಡಿದ್ದರು. ಇವರ ಈ ಹಿಂದೆ ಮಂಗಳೂರು ನಗರದಲ್ಲಿ ನಡೆದಿದ್ದ ಉಗ್ರ ಸಂಘಟನೆ ಪರ ಗೋಡೆ ಬರಹದಲ್ಲೂ ಆರೋಪಿಗಳಾಗಿದ್ದರು.
ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ಶಾರೀಕ್ ಎಂದು ಪೊಲೀಸರ ಶಂಕೆ