
Mangaluru: ಕುಕ್ಕರ್ ಬಾಂಬ್ ಬ್ಲಾಸ್ಟ್; ಗಾಯಾಳು ಗುರುತು ಪತ್ತೆಗೆ ಶಾರಿಕ್ ಪೋಷಕರ ಆಗಮನ
Monday, November 21, 2022
ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಸಂಬಂಧ ಗಾಯಾಳು ಪ್ರಯಾಣಿಕನ ಪತ್ತೆಗಾಗಿ ಇಬ್ಬರು ಮಹಿಳೆಯರು ಆಗಮಿಸಿದ್ದಾರೆ.
ಸ್ಫೋಟದಿಂದಾಗಿ ಮುಖ ಹಾಗೂ ತಲೆ ಸುಟ್ಟಿರುವುದಿಂದ ಆರೋಪಿಯ ಪತ್ತೆ ಹಚ್ಚಲೆಂದು ಇಬ್ಬರು ಮಹಿಳೆಯರು ನಗರದ ಫಾದರ್ ಮುಲ್ಲರ್ ಆಸ್ಪತ್ರೆಗೆ ಆಗಮಿಸಿದ್ದಾರೆ.
ಆಗಮಿಸಿರುವ ಮಹಿಳೆಯರು ಶಂಕಿತ ಉಗ್ರ ಶಾರಿಕ್ ಪೋಷಕರು ಎಂದು ತಿಳಿದು ಬಂದಿದೆ.
ಶಾರಿಕ್ ಸದ್ಯ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮಹಿಳೆಯರ ಜೊತೆಗೆ ತನಿಖಾಧಿಕಾರಿ ಕೇಂದ್ರ ಉಪವಿಭಾಗದ ಎಸಿಪಿ ಪರಮೇಶ್ವರ ಹೆಗಡೆ ಅವರು ಆಗಮಿಸಿದ್ದು, ಆಸ್ಪತ್ರೆ ಒಳಗಡೆ ತೆರಳಿದ್ದಾರೆ.
ಮಹಿಳೆಯರು ಗುರುತು ಪತ್ತೆ ಹಚ್ಚಿದ ಬಳಿಕವಷ್ಟೇ ಮುಂದಿನ ಪ್ರಕ್ರಿಯೆ ಪೊಲೀಸರು ಕೈಗೊಳ್ಳಲಿದ್ದಾರೆ. ಗೊಂದಲ ಮುಂದುವರಿದಲ್ಲಿ DNA ಪರೀಕ್ಷೆ ಮುಂದಾಗುವ ಸಾಧ್ಯತೆ ಇದೆ.