Mangaluru : ಐಸಿಸ್ ಧಿರಿಸಿನಲ್ಲಿ ಶಾರಿಕ್; ಸ್ಫೋಟಕ್ಕೂ ಮುನ್ನಾ ಮತಾಂಧನ ಅಟ್ಟಹಾಸ!
ಮಂಗಳೂರು: ಆಟೋ ರಿಕ್ಷಾ ಸ್ಫೋಟ ಪ್ರಕರಣ ಸಂಬಂಧ ಶಂಕಿತ ಉಗ್ರ ಶಾರಿಕ್ ನ ಒಂದೊಂದೇ ಮುಖವಾಡ ಬಯಲಾಗತೊಡಗಿದೆ. ಐಸಿಸ್ ಉಗ್ರರನ್ನೇ ಅನುಸರಿಸುತ್ತಿದ್ದ ಶಾರಿಖ್ ಅವರನ್ನೇ ಹೋಲುವ ಧಿರಿಸಿ ಧರಿಸಿ ಕುಕ್ಕರ್ ಬಾಂಬ್ ಜೊತೆಗೆ ಕಾಣಿಸಿಕೊಂಡಿರುವ ಫೋಟೋ ಲಭ್ಯವಾಗಿದೆ.
ಮೈಸೂರಿನ ಮನೆಯಲ್ಲಿ ಲಭ್ಯವಾಗಿದೆ ಎನ್ನಲಾದ ಆತನ ಫೋಟೋಗಳು ನಿಜಕ್ಕೂ ಭಯಾನಕವಾಗಿದೆ.
ಕುಕ್ಕರ್ ಬಾಂಬ್ ತಯಾರಿಸಿದ ಬಳಿಕ ಆತ ಕುಕ್ಕರ್ ಬಾಂಬ್ ಜೊತೆಗೆ ಫೋಟೋಗೆ ಫೋಸು ನೀಡಿದ್ದ. ಬಲಗೈಯ ತೋರು ಬೆರಳು ಎತ್ತಿ ತೋರಿಸುತ್ತಾ ಐಸಿಸ್ ಮಾದರಿ ಅನುಸರಿಸಿದ್ದ. ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ಅರೇಬಿಕ್ ದೇಶಗಳಲ್ಲಿ ಧರಿಸುವ ರುಮಾಲು ಧರಿಸಿ ಫೋಟೋದಲ್ಲಿ ಕಾಣಿಸಿಕೊಂಡಿದ್ದಾನೆ.
ಹೀಗಾಗಿ ಶಾರಿಕ್ ಬಹುದೊಡ್ಡ ಭಯೋತ್ಪಾದನಾ ಕೃತ್ಯಕ್ಕೆ ಸಂಚು ಹೂಡಿದ್ದ ಅನ್ನೋದು ಬಯಲಾಗಿದೆ.
ಇಸ್ಲಾಮ್ ಧರ್ಮವೇ ಶ್ರೇಷ್ಠ ಅನ್ನೋ ಸಂಕೇತವಾಗಿ ಒಂದು ಬೆರಳನ್ನು ಎತ್ತಿ ತೋರಿಸುವ ಮೂಲಕ ಈತ ತನ್ನ ಕೃತ್ಯಕ್ಕೆ ಮತಾಂಧತೆ ಬಳಸಿಕೊಂಡಿದ್ದಾನೆ.
ಮೈಸೂರಿನಲ್ಲಿ ಈತ ಇದುವರೆಗೂ ಅವಿತುಕೊಂಡಿದ್ದು ಪೊಲೀಸರಿಗೆ ಕೈಗೆ ಸಿಗದೇ ಇರುವುದು ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.