
Mangaluru: ಶಾರಿಕ್ ತಂಗಿದ್ದ ಮನೆಯಲ್ಲಿ ಅಪಾರ ಪ್ರಮಾಣದ ವಸ್ತು ಸೀಝ್; ಆತ್ಮಾಹುತಿಗೆ ಮಾಡಿದ್ದನೇ ಸಿದ್ಧತೆ!?
ಮಂಗಳೂರು: ಆಟೋ ರಿಕ್ಷಾ ಬಾಂಬ್ ಬ್ಲಾಸ್ಟ್ ನಲ್ಲಿ ಗಾಯಗೊಂಡ ಪ್ರಯಾಣಿಕ
ಶಂಕಿತ ಐಸಿಸ್ ಉಗ್ರ ಶಾರಿಕ್ ಎಂದು ಆತನ ಪೋಷಕರು ಪತ್ತೆ ಹಚ್ಚಿದ್ದಾರೆ. ಹೀಗಾಗಿ ಗಾಯಗೊಂಡ ಪ್ರಯಾಣಿಕ
ಯಾರು ಎಂಬುವುದು ಈಗ ತಿಳಿದಂತಾಗಿದೆ. ಗಾಯಾಳು ಗುಣಮುಖನಾದ ಕೂಡಲೇ ಆತನನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ
ಕೈಗೆತ್ತಿಕೊಳ್ಳಲಿದ್ದಾರೆ.
ಉಗ್ರ ಬದುಕುಳಿಯುವುದೇ ಡೌಟು?
ಸದ್ಯಕ್ಕೆ ಸುಟ್ಟ ಗಾಯಗಳಿಂದ ಆಸ್ಪತ್ರೆ ದಾಖಲಾದ ಉಗ್ರ ಶಾರಿಕ್ ಸಾವು
ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಈತ ಬದುಕುಳಿಯುವುದೇ ಸಂಶಯ ಎಂದು ಹೇಳಲಾಗುತ್ತಿದೆ. ಆದರೆ, ಈತ
ಒಂದು ವೇಳೆ ಸತ್ತು ಹೋದಲ್ಲಿ ಪೊಲೀಸರ ಹೆಚ್ಚಿನ ವಿಚಾರಣೆ ಹಾಗೂ ಆತ ಹೂಡಿದ್ದ ಮುಂದಿನ ಸಂಚು ಯಾವುದು?
ಆತನ ಬೆನ್ನ ಹಿಂದೆ ಇರೋರು ಯಾರು? ಫೋಟೋ ಶೂಟ್ ಮಾಡಿದವರು ಯಾರು? ಈ ಎಲ್ಲ ಪ್ರಶ್ನೆಗಳಿಗೆ ಪೊಲೀಸರು
ಇನ್ನಷ್ಟು ವರ್ಕೌಟ್ ಮಾಡಬೇಕಾಗುತ್ತದೆ.
ಆತ್ಮಾಹುತಿಗೆ ನಡೆದಿತ್ತೇ ಸಂಚು?
ಆಟೋ ರಿಕ್ಷಾದಲ್ಲಿ ತೆರಳಬೇಕಾದರೆ ರಸ್ತೆ ಹಂಪ್ ನಿಂದಾಗಿ ಬಾಂಬ್ ಸ್ಫೋಟಗೊಂಡಿದೆ
ಎನ್ನಲಾಗುತ್ತಿದೆ. ಆದರೆ, ಈತನ ಐಸಿಸ್ ಮಾದರಿಯ ಫೋಟೋ ಶೂಟ್ ಗಮನಿಸುತ್ತಿದ್ದರೆ ಈತ ಆತ್ಮಾಹುತಿ ದಾಳಿಗೆ
ಸಂಚು ಹೂಡಿದ್ದನೇ ಅನ್ನೋದು ಗೊತ್ತಾಗಿಲ್ಲ. ಬಾಂಬ್ ಹೊತ್ತೊಯ್ದು ತಂದಿದ್ದ ಈತ ಅದನ್ನು ಜನನಿಬಿಡ ಪ್ರದೇಶದಲ್ಲಿ
ಸ್ಫೋಟಿಸುವ ಸಂಚು ಹೂಡಿದ್ದನೇ ಅನ್ನೋದು ಗೊತ್ತಾಗಿಲ್ಲ. ರೈಲು ನಿಲ್ದಾಣ, ಬಸ್ ನಿಲ್ದಾಣ, ನಗರದ ಮಾಲ್
ಗಳು, ಬಂದರು ಹೀಗೆ ಯಾವುದಾದರೊಂದು ಈತನ ಟಾರ್ಗೆಟ್ ಆಗಿತ್ತೇ ಅನ್ನೋದು ಗೊತ್ತಾಗಿಲ್ಲ. ಅಥವಾ ತನ್ನ
ಪ್ಲ್ಯಾನ್ ಬದಲಾಯಿಸಿ ಆಟೋ ರಿಕ್ಷಾದಲ್ಲಿಯೇ ಸ್ಫೋಟಿಸಿಕೊಂಡು ಆಟೋ ಚಾಲಕನ ಪ್ರಾಣಕ್ಕೆ ಸಂಚಕಾರ ಹಾಗೂ
ಭಯದ ವಾತಾವರಣ ಸೃಷ್ಟಿಸುವ ಪ್ರಯತ್ನ ಮಾಡಿದ್ದನೇ ಅನ್ನೋದು ಕೂಡಾ ತನಿಖೆಯ ಭಾಗವಾಗಿದೆ.
ಮೈಸೂರಿನ ಮನೆಯಲ್ಲಿತ್ತು ಸ್ಫೋಟಕ!
ಮೈಸೂರಿನಲ್ಲಿ ಆತ ತಂಗಿದ್ದ ಮನೆಯಲ್ಲಿ ತನಿಖೆ ನಂತರ ಎಕೆ 47, ಸಜೀವ
ಗುಂಡುಗಳು, ಮೊಬೈಲ್ ಡಿಸ್ಪ್ಲೇಗಳು, ರಾಸಾಯನಿಕ, ಕುಕ್ಕರ್, ನಟ್ ಬೋಲ್ಟ್ ಗಳು, ಸಲ್ಫರ್, ಮಿಕ್ಸರ್,
ಮ್ಯಾಚ್ ಬಾಕ್ಸ್, ಮೆಕ್ಯಾನಿಕಲ್ ಟೈಮರ್, ಮೊಬೈಲ್, ಸಿಮ್ ಕಾರ್ಡ್, ಆಧಾರ್ ಕಾರ್ಡ್ ಗಳನ್ನು ವಶಕ್ಕೆ
ಪಡೆದು ಮಂಗಳೂರಿಗೆ ತರಲಾಗಿದೆ.