KUDLA: ನ.20ರಂದು ಸುರತ್ಕಲ್ `ತುಳು ಉತ್ಸವ' ಸ್ಪರ್ಧೆ...
Tuesday, November 15, 2022
ಮಂಗಳೂರು: ಅಪ್ಪೆ ಬಾಸೆ ಪೊರ್‌ಂಬಾಟ ಕೂಟ ತುಲುನಾಡು ಇದರ ವತಿಯಿಂದ `ಸುರತ್ಕಲ್ ತುಳು ಉತ್ಸವ' ಇದೇ 27ರಂದು ಸಂಜೆ 4 ಗಂಟೆಗೆ ಕರ್ನಾಟಕ ಸೇವಾ ವೃಂದದಲ್ಲಿ ನಡೆಯಲಿದೆ. ಇನ್ನು ಇದಕ್ಕೆ ಸಂಬಂಧಪಟ್ಟ ಸ್ಪರ್ಧಾ ಕೂಟಗಳು ಇದೇ 20ರಂದು ಶನಿವಾರ ಸುರತ್ಕಲ್ ನ ಗೋವಿಂದದಾಸ ಕಾಲೇಜು ಆವರಣದಲ್ಲಿ ಬೆಳಿಗ್ಗೆ 11ಗಂಟೆಗೆ ಆಯೋಜಿಸಲಾಗಿದೆ.
ಇದು ಮಂಗಳೂರು, ಉಡುಪಿ ಮತ್ತು ಕಾಸರಗೋಡಿನ ತುಳುನಾಡಿನ ಜನತೆಗೆಗಾಗಿ ವಿಭಿನ್ನವಾಗಿ ಆಯೋಜಿಸಲಾಗಿದೆ. ಇದರಲ್ಲಿ ವಿವಿಧ ತುಳುನಾಡಿಗೆ ಸಂಬಂಧಪಟ್ಟ ಸ್ಪರ್ಧೆಗಳನ್ನ ಆಯೋಜಿಸಲಾಗಿದೆ. ಎಲ್ಲಾ ತುಳುನಾಡಿನ ಜನತೆ ಈ ವಿಶೇಷ ತುಳು ಉತ್ಸವದಲ್ಲಿ ಭಾಗಿಯಾಗಲು ಆಯೋಜಕರು ತಿಳಿಸಿದ್ದಾರೆ.
ಇನ್ನು ಸ್ಪರ್ಧೆಗೆ ಸಂಬಂಧಿಸದಂತೆ ನಿಯಮಗಳನ್ನು ಮಾಡಲಾಗಿದೆ. ಆ ನಿಯಮದಂತೆ ಸ್ಪರ್ಧೆಗಳು ನಡೆಯಲಿದ್ದು, ಸ್ಪರ್ಧಾಳುಗಳು ನಿಯಮಗಳನ್ನ ಪಾಲನೆ ಮಾಡಬೇಕಿದೆ.

.jpeg)