
UDUPI: ನಿಯಂತ್ರಣ ತಪ್ಪಿ ತೀರಕ್ಕೆ ಅಪ್ಪಳಿಸಿದ ಬೋಟ್...
Tuesday, November 15, 2022
ಕುಂದಾಪುರ: ನಿಯಂತ್ರಣ ತಪ್ಪಿ ಬೋಟ್ ಸಮುದ್ರ ತೀರಕ್ಕೆ ಅಪ್ಪಳಿಸದಂತ ಘಟನೆ ಕುಂದಾಪುರದ ತೆಕ್ಕಟ್ಟೆ ಕೊಮೆ ಕಡಲತಡಿಯಲ್ಲಿ ನಡೆದಿದೆ.
ನಿನ್ನೆ ಸುಮಾರು 1 ಗಂಟೆ ರಾತ್ರಿಗೆ ಈ ಅವಘಡ ನಡೆದಿದ್ದು, ಬೋಟ್ ನಲ್ಲಿದ್ದ ಆರು ಮಂದಿ ಮೀನುಗಾರರನ್ನ ರಕ್ಷಣೆ ಮಾಡಲಾಗಿದೆ. ಜೊತೆಗೆ ಬೋಟ್ ಗೂ ಕೂಡ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ಗಂಗೊಳ್ಳಿ ಮೂಲದ ಮೀನುಗಾರಿಕಾ ಬೋಟ್ ಇದಾಗಿದ್ದು, ಸುರಕ್ಷಿತವಾಗಿ ಬೋಟನ್ನು ಮೇಲೆತ್ತುವ ಸಲುವಾಗಿ ಅದರಲ್ಲಿದ್ದ ಸರಕನ್ನು ಹೊರ ತೆಗೆಯಲಾಗಿದೆ. ಬಳಿಕ ಬೋಟ್ ನ್ನು ಮೇಲೆಕೆತ್ತುವ ಕಾರ್ಯ ನಡೆದಿದೆ.