Heavy Rain | ಕಡಬ: ಗುಡುಗು, ಮಿಂಚು ಸಹಿತ ಭಾರೀ ಗಾಳಿ ಮಳೆ
Tuesday, November 15, 2022
ಕಡಬ: ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದೆ. ಮಧ್ಯಾಹ್ನ ನಂತರ ಆರಂಭವಾದ ಗುಡುಗು, ಮಿಂಚು ಸಹಿತ ಭಾರೀ ಗಾಳಿ ಮಳೆ ಮುಂದುವರೆದಿದೆ.
ಸಾಯಂಕಾಲವಾದರೂ ಮಳೆ ಜೋರಾಗಿ ಸುರಿಯುತ್ತಿದ್ದು, ಇನ್ನೊಂದೆಡೆ ಮಿಂಚು, ಗುಡುಗು ಇದ್ದು ಶಾಲಾ ಮಕ್ಕಳು ಮನೆಗೆ ವಾಪಸ್ ಆಗಲು ಪರದಾಡಿದರು. ಧಾರಾಕಾರ ಮಳೆಯಿಂದ ರಸ್ತೆ ತುಂಬಾ ನೀರು ಹರಿದುಹೋಗುತ್ತಿದ್ದು, ವಾಹನ ಸವಾರರು ಪರದಾಡುವಂತಾಯಿತು.
ಉಳಿದಂತೆ ಸುಳ್ಯ, ಪುತ್ತೂರು ಭಾಗದಲ್ಲೂ ಕೊಂಚ ಮಳೆಯಾಗಿದೆ.
ಇಂದು ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗುವ ಸಾಧ್ಯತೆ ಇದೆ.
ವೀಡಿಯೋ