
BELTHANGADY: ಕಿಲ್ಲೂರು ಮಸ್ಜಿದ್ ನ ಮಾಜಿ ಅಧ್ಯಕ್ಷ ಆತ್ಮಹತ್ಯೆ...!!!
Wednesday, November 16, 2022
ಬೆಳ್ತಂಗಡಿ: ಸಾಲ ಬಾದೆಗೊಳಗಾಗಿದ್ದ ಕಿಲ್ಲೂರು ಮಸ್ಜಿದ್ ನ ಮಾಜಿ ಅಧ್ಯಕ್ಷ ಬಿ.ಹೆಚ್ ಅಬ್ದುಲ್ ಹಮೀದ್ (64) ಅವರು ನ.5 ರಂದು ವಿಷ ಸೇವಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ನ.5 ರಂದು ಸಂಜೆಯವರೆಗೆ ಮನೆಯಲ್ಲಿಯೇ ಇದ್ದ ಅವರು, ಬಳಿಕ ಮನೆಯ ಪಕ್ಕದ ನೇತ್ರಾವತಿ ನದಿ ಕಿನಾರೆಯ ಅಲಂಜಿಕಟ್ಟ ಎಂಬಲ್ಲಿಗೆ ತೆರಳಿ ವಿಷ ಸೇವಿಸಿ ತೀವ್ರ ಅಸ್ವಸ್ಥರಾಗಿ ಬಿದ್ದಿದ್ದರು. ಗಂಭೀರಾವಸ್ಥೆಯಲ್ಲಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹಮೀದ್ ಅವರು ಕಿಲ್ಲೂರು ಮಸ್ಜಿದ್‌ನ ಅಧ್ಯಕ್ಷರಾಗಿ ಮಸೀದಿಯ ಸಮಗ್ರ ಅಭಿವೃದ್ಧಿ, ನೂತನ ಮದರಸ ಕಟ್ಟಡ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮೃತರು ಪತ್ನಿ ಐಸುಂಜ್ಞಿ, ಏಕೈಕ ಪುತ್ರ ಶಾಕಿರ್ ಮತ್ತು ಸಹೋದರರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.