KUNDAPURA: ಕುಂದಾಪುರದಲ್ಲಿ ಮತ್ತೆ ಧರ್ಮ ದಂಗಲ್...!!!
Wednesday, November 16, 2022
ಕುಂದಾಪುರ: ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಕ್ರೀಡಾಕೂಟದಲ್ಲಿ ಆಝಾನ್ ಗೆ ನೃತ್ಯ ಮಾಡಿರುವುದನ್ನು ಹಿಂದು ಜಾಗರಣ ವೇದಿಕೆ ಖಂಡಿಸಿದೆ.
ನಿನ್ನೆ ಶಂಕರನಾರಾಯಣದ ಮದರ್ ಥೆರೆಸಾ ಮೆಮೋರಿಯಲ್ ಶಾಲೆ ಆಯೋಜಿಸಿದ್ದ ವಲಯ ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಲ್ಲಾ ಹು ಅಕ್ಬರ್ ಆಝಾನ್ ಗೆ ವಿದ್ಯಾರ್ಥಿಗಳು ನೃತ್ಯ ಮಾಡಿದ್ದರು. ಈ ಬಗ್ಗೆ ಸ್ಥಳದಲ್ಲೇ ಆಕ್ಷೇಪ ವ್ಯಕ್ತವಾಗಿತ್ತು. ಅದಲ್ಲದೇ ಇದನ್ನ ಹಿಂದೂ ವಿದ್ಯಾರ್ಥಿಗಳಿಂದ ಮಾಡಿಸಿದ್ದಕ್ಕೆ ಸ್ಥಳದಲ್ಲೇ ಖಂಡನೆ ವ್ಯಕ್ತವಾಗಿತ್ತು.
ಇನ್ನು ಈ ಕಾರ್ಯಕ್ರಮದಲ್ಲಿ ಹಿಂದೂ ಕ್ರಿಶ್ಚಿಯನ್ ಮುಸ್ಲಿಂ ಹಾಡಿಗೆ ವಿದ್ಯಾರ್ಥಿಗಳು ಕುಣಿದಿದ್ದರು. ಇದನ್ನ ಖಂಡಿಸಿ ಇಂದು ಹಿಂದು ಜಾಗರಣ ವೇದಿಕೆ ಶಂಕರನಾರಯಣ ಜಂಕ್ಷನ್ ನಲ್ಲಿ ರಸ್ತೆ ಪ್ರತಿಭಟನೆ ನಡೆಸಿದ್ರು. ಜೊತೆಗೆ ಹಿಂದೂ ವಿರೋಧಿ ನೀತಿ ಮತ್ತು ನಡವಳಿಕೆ ಮಾಡದಂತೆ ಇದೇ ವೇಳೆ ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ ನೀಡಿದೆ.
