MANGALURU: ಕಟೀಲು ಅಮ್ಮನ ದರ್ಶನ ಪಡೆದ ನಟಿ ಸಪ್ತಮಿ ಗೌಡ...!!!
Wednesday, November 16, 2022
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಾಂತಾರ ನಟಿ ಸಪ್ತಮಿ ಗೌಡ ಇಂದು ಭೇಟಿ ನೀಡಿ ಅಮ್ಮನವರ ದರ್ಶನ ಪಡೆದರು. ಈ ವೇಳೆ ಸಪ್ತಮಿ ತಾಯಿ ಶಾಂತಿ ಹಾಗೂ ನಟ ಸನಿಲ್ ಗುರು ಜೊತೆಗಿದ್ದರು.
ನಟಿ ಸಪ್ತಮಿ ಗೌಡ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಳದ ಅರ್ಚಕ ಶೇಷ ವಸ್ತ್ರದ ಪ್ರಸಾದ ನೀಡಿ ಕಾಂತಾರ ಬೆಡಗಿಯನ್ನ ಗೌರವಿಸಿದರು. ಇದೇ ವೇಳೆ ಮೂಗುತಿ ಸುಂದರಿ ಜೊತೆ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಪ್ತಮಿ ಗೌಡ, ಕಾಂತಾರ ಯಶಸ್ಸಿನ ಬಗ್ಗೆ ನಮಗೆ ಹೆಮ್ಮೆ ಇದೆ ಎಂದರು. ತುಳುನಾಡಿನ ದೈವರಾದನೆ ಬಗ್ಗೆ ಈ ಹಿಂದೆ ನನಗೆ ತಿಳಿದಿರಲಿಲ್ಲ. ಕಾಂತಾರ ಚಿತ್ರದ ಬಳಿಕ ದೈವರಾದನೆ ಬಗ್ಗೆ ತಿಳಿದುಕೊಂಡಿದ್ದೇನೆ ಎಂದರು. ಇನ್ನು ತುಳು ಭಾಷೆಯ ಸಿನಿಮಾದಲ್ಲಿ ಒಂದು ವೇಳೆ ಅವಕಾಶ ಸಿಕ್ಕರೆ ಖಂಡಿತ ನಟಿಸುವುದಾಗಿ ಹೇಳಿದ್ರು.
