
ನ್ಯಾಯಾಲಯವನ್ನೇ ಕಟಕಟೆಗೆ ತರಲಿದೆ ಈ ಪಿಐಎಲ್!
Friday, October 21, 2022
ಮುಂಬೈ: ಸಾಮಾಜಿಕ ಕಾರ್ಯಕರ್ತೆಯೋರ್ವರು ನ್ಯಾಯಾಲಯದ ರಜೆ ಕುರಿತು ಮರು ಪರಿಶೀಲನೆ ಮಾಡುವಂತೆ ಮಹಾರಾಷ್ಟ್ರದ ಮುಂಬೈ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿದ್ದಾರೆ.
ನ್ಯಾಯಾಲಯಗಳು ಬಹಳ ರಜೆಗಳನ್ನು ಪಡೆಯುವುದು ಪ್ರಕರಣಗಳ ಸಲ್ಲಿಕೆ ಹಾಗೂ ವಿಚಾರಣೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ದೂರಿದ್ದಾರೆ.
ವಿಶೇಷ ಅಂದರೆ, ಈ ಕುರಿತ ಅರ್ಜಿಯನ್ನು ದೀಪಾವಳಿ ರಜೆ ನಂತರ ವಿಚಾರಣೆಗೆ ತೆಗೆದುಕೊಳ್ಳುವುದಾಗಿ ಹೈಕೋರ್ಟ್ ತಿಳಿಸಿದೆ.
ನ್ಯಾಯಾಲಯಗಳು ಬಹಳಷ್ಟು ರಜೆಯನ್ನು ಪಡೆಯುವುದು ನ್ಯಾಯ ಪಡೆಯುವ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ. ಇದು ಅರ್ಜಿದಾರರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರೆ ಸಬೀನಾ ಲಕ್ಷವಾಲ ತಮ್ಮ ವಕೀಲರ ಮೂಲಕ ಹೈಕೋರ್ಟ್ ಗೆ ತಿಳಿಸಿದ್ದಾರೆ.
ಮುಂಬೈ ಹೈಕೋರ್ಟಿನ ದೀಪಾವಳಿ ರಜೆಯು ಅಕ್ಟೋಬರ್ 22 ರಿಂದ ಆರಂಭವಾಗಿ ನವೆಂಬರ್ 9ರ ವರೆಗೆ ಇರಲಿದೆ. ಸಬೀನಾ ಸಲ್ಲಿಸಿದ ಅರ್ಜಿಯು ನವೆಂಬರ್ 15 ರಂದು ವಿಚಾರಣೆಗೆ ಬರಲಿದೆ.