
ಜಿಹಾದ್ ಭಗವದ್ಗೀತೆಯಲ್ಲೂ ಕಲಿಸಲಾಗಿದೆ: ಶಿವರಾಜ್ ಪಾಟೀಲ್ ವಿವಾದ
Friday, October 21, 2022
ನವದೆಹಲಿ: ಜಿಹಾದ್ ಎನ್ನುವುದು ಕುರಾನ್ ಮಾತ್ರವಲ್ಲ, ಭಗವದ್ಗೀತೆಯಲ್ಲೂ ಕಲಿಸಲಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ್ ನೀಡಿರುವ ಹೇಳಿಕೆ ವಿವಾದಕ್ಕೀಡಾಗಿದೆ.
ಗುರುವಾರ ದೆಹಲಿಯಲ್ಲಿ ನಡೆದ ಕೇಂದ್ರದ ಮಾಜಿ ಸಚಿವೆ ಮೊಹ್ಸಿನಾ ಕಿದ್ವಾಯಿ ಆತ್ಮಚರಿತ್ರೆ ಬಿಡುಗಡೆ ಸಂದರ್ಭ ಶಿವರಾಜ್ ಪಾಟೀಲ್ ಮಾತನಾಡಿದರು.
"ಪ್ರತಿ ಬಾರಿಯೂ ಇಸ್ಲಾಮಿನ ಜಿಹಾದ್ ಕುರಿತು ಚರ್ಚೆಗಳು ನಡೆಯುತ್ತವೆ. ಆದರೆ ಹೆಚ್ಚಿನವರಿಗೆ ಜಿಹಾದ್ ನಿಜಾರ್ಥ ತಿಳಿದಿಲ್ಲ. ಕುರಾನ್ ಮಾತ್ರವಲ್ಲ ಗೀತೆಯೂ ಜಿಹಾದ್ ಕಲಿಸುತ್ತದೆ. ಮಹಾಭಾರತದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಬೋಧಿಸಿದ್ದು ಜಿಹಾದ್ ಆಗಿದೆ" ಎಂದು ಪಾಟೀಲ್ ತಿಳಿಸಿದ್ದಾರೆ.
ವೇದಿಕೆಯಲ್ಲಿ ಸಂಸದ ಶಶಿ ತರೂರ್, ಫಾರೂಕ್ ಅಬ್ದುಲ್ಲ, ಸುಶೀಲ್ ಕುಮಾರ್ ಶಿಂಧೆ ಉಪಸ್ಥಿತರಿದ್ದರು.
ಸದ್ಯ ಶಿವರಾಜ್ ಪಾಟೀಲ್ ನೀಡಿದ ಈ ಹೇಳಿಕೆ ವಿವಾದದ ರೂಪ ಪಡೆದಿದ್ದು, ಬಿಜೆಪಿ ನಾಯಕರು ಹೇಳಿಕೆ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ.