
ಮಂಗಳೂರು: ಚಿತ್ರ ತಂಡದೊಂದಿಗೆ 'ಕಾಂತಾರ' ವೀಕ್ಷಿಸಲಿರುವ ಖಾವಂದರು
Friday, October 21, 2022
ಮಂಗಳೂರು: ದೇಶಾದ್ಯಂತ ಸದ್ದು ಮಾಡುತ್ತಿರುವ ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ 'ಕಾಂತಾರ' ಕನ್ನಡ ಚಿತ್ರವನ್ನು ಇಂದು ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ ಅವರು ತಮ್ಮ ಕುಟುಂಬ ಸಮೇತರಾಗಿ ಚಿತ್ರ ತಂಡದ ಕಲಾವಿದರ ಜೊತೆಗೂಡಿ ವೀಕ್ಷಿಸಲಿದ್ದಾರೆ.
ಬಿಜೈನಲ್ಲಿರುವ ಬಿಗ್ ಸಿನಿಮಾಸ್‌ನಲ್ಲಿ ಸಾಯಂಕಾಲ 7 ಗಂಟೆಯ ಚಿತ್ರ ವೀಕ್ಷಣೆಗೆ ಅವರು ಆಗಮಿಸಲಿದ್ದಾರೆ. ಈ ಸಂದರ್ಭ ಹಲವು ಗಣ್ಯರು ಹಾಗೂ ಚಿತ್ರತಂಡದಲ್ಲಿರುವ ಮಂಗಳೂರು ಮೂಲದ ಸರ್ವ ಕಲಾವಿದರು ಉಪಸ್ಥಿತರಿರಲಿದ್ದಾರೆ.
ಆದರೆ, ವಿದೇಶಿ ಪ್ರವಾಸದಲ್ಲಿರುವ ರಿಷಬ್ ಶೆಟ್ಟಿ ಭಾಗವಹಿಸುತ್ತಿಲ್ಲ ಎಂದು ಚಿತ್ರತಂಡ ಹೇಳಿದೆ. ಇನ್ನೊಂದೆಡೆ ಇಂದಿನಿಂದ ಮಲಯಾಳಂ ನಲ್ಲೂ 'ಕಾಂತಾರ' ಚಿತ್ರ ತೆರೆ ಕಾಣಲಿದೆ. ಮುಂದಿನ ದಿನಗಳಲ್ಲಿ ತುಳು ಭಾಷೆಯಲ್ಲೂ ಚಿತ್ರ ತೆರೆ ಮೇಲೆ ಬರಲಿದೆ.