-->
ಉಡುಪಿ| ಪಿಲಿಕೋಲ ಕಟ್ಟುವ ಗುಡ್ಡ ಪಾಣಾರರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

ಉಡುಪಿ| ಪಿಲಿಕೋಲ ಕಟ್ಟುವ ಗುಡ್ಡ ಪಾಣಾರರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

 


ಉಡುಪಿ: ಕಾಪುವಿನಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಪಿಲಿಕೋಲ (ಹುಲಿ ಕೋಲ) ದೈವಪಾತ್ರಿಯಾಗಿ ಸೇವೆ ಮಾಡುತ್ತಿದ್ದ ಕಾಪು ತಾಲೂಕಿನ ದೈವ ನರ್ತಕ ಗುಡ್ಡ ಪಾಣಾರರಿಗೆ ಈ ಸಾಲಿನ‌ ರಾಜ್ಯೋತ್ಸವ ಪ್ರಶಸ್ತಿ ಇಂದಿದೆ. ಇಂದು ಬಿಡುಗಡೆಯಾದ ಪಟ್ಟಿಯಲ್ಲಿ ಅವರ ಹೆಸರು ಇದ್ದು, ಇದು ಅವರ ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಿಸಿದೆ.‌



"ನಾನೋರ್ವ ಹಳ್ಳಿಯ ಬಡವ. ಈ ಪ್ರಶಸ್ತಿ ನೀಡಿದ್ದು ಭಾರೀ ಖುಷಿಯಾಗಿದೆ. ನನ್ನನ್ನು ಹುಡುಕಿ ರಾಜ್ಯ ಪ್ರಶಸ್ತಿ ಕೊಟ್ಟದ್ದು ನನಗೆ ಖುಷಿ ಮತ್ತು ಸಂತೋಷ ತಂದಿದೆ. ಕಳೆದ 38 ವರ್ಷಗಳಿಂದ ನಾನು ದೈವದ ಸೇವೆ ಮಾಡುತ್ತಿದ್ದೇನೆ. ಅದರಲ್ಲೂ ಕಳೆದ 27 ವರ್ಷಗಳಿಂದ ಪಿಲಿಕೋಲ ಕಟ್ಟುತ್ತಿದ್ದೇನೆ" ಎಂದರು.


68 ರ ಹರೆಯದ ಗುಡ್ಡ ಪಾಣಾರರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದ ಹಿನ್ನೆಲೆ ಹಲವು‌ ಗಣ್ಯರು ಅವರಿಗೆ ಶುಭ ಕೋರಿದ್ದಾರೆ.


Ads on article

Advertise in articles 1

advertising articles 2

Advertise under the article