
ಮಂಗಳೂರು| ಅಡ್ಯಾರ್ ಡ್ಯಾಂ ಬಳಿ ದೋಣಿ ಪಲ್ಟಿ; ಮೀನುಗಾರ ಸಾವು!
Sunday, October 30, 2022
ಮಂಗಳೂರು: ನೇತ್ರಾವತಿ ನದಿಯಲ್ಲಿ ಮೀನು ಹಿಡಿಯಲು ಹೋದ ವೇಳೆ ದೋಣಿ ಮಗುಚಿ ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಅಡ್ಯಾರ್ ಕಟ್ಟೆಯಲ್ಲಿ ನಡೆದಿದೆ.
ಅಡ್ಯಾರ್ ನಿವಾಸಿ ರಾಬರ್ಟ್ ಫೆರಾವೊ (77) ಮೃತರು.
ಇಂದು ಸಂಜೆ 4.30ರ ವೇಳೆ ಮೀನು ಹಿಡಿಯಲೆಂದು ತನ್ನ ಸಣ್ಣ ದೋಣಿಯಲ್ಲಿ ರಾಬರ್ಟ್ ಅವರು ನೇತ್ರಾವತಿ ನದಿಗೆ ತೆರಳಿದ್ದರು. ಈ ಸಂದರ್ಭ ಅಡ್ಯಾರ್ ನ ಡ್ಯಾಂ ಬಳಿ ತೆರಳುತ್ತಲೇ ದೋಣಿಯು ಮಗುಚಿ ಬಿದ್ದಿದೆ ಎನ್ನಲಾಗಿದೆ. ತಕ್ಷಣವೇ ಸ್ಥಳೀಯರು ಸಾಹಸಮಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಅವರನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ. ಡ್ಯಾಂ ನಲ್ಲಿ ರಭಸದಿಂದ ನೀರು ಹರಿಯುತ್ತಿದ್ದರೂ ಹಗ್ಗ ಹಾಗೂ ದೋಣಿಯ ಸಹಾಯದಿಂದ ಅವರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಪಟ್ಟಿದ್ದಾರೆ.
ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಅವರು ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.
ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಕ್ಷಣಾ ಕಾರ್ಯಾಚರಣೆಯ ಸಾಹಸಮಯ ದೃಶ್ಯ