VITTLA: ವಿಟ್ಲದ ಬೇಕರಿಯಲ್ಲಿದ್ದ ಮಹಿಳೆ ದಿಢೀರ್ ನಾಪತ್ತೆ...!!!
Monday, October 31, 2022
ವಿಟ್ಲ: ಬೇಕರಿಯಲ್ಲಿ ಕೆಲಸಕ್ಕಿದ್ದ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ವಿಟ್ಲದಲ್ಲಿ ನಡೆದಿದೆ. ಕಡಂಬು ಪರಿಸರದ ನಿವಾಸಿ ನಾಗೇಶ್ ಎಂಬವರ ಪತ್ನಿ ಕವಿತಾ(29) ನಾಪತ್ತೆಯಾಗಿರುವ ಮಹಿಳೆ.
ವಿಟ್ಲ-ಮಂಗಳೂರು ರಸ್ತೆಯಲ್ಲಿರುವ ಎನ್ ಆರ್ ಭಟ್ ಬೇಕರಿಯಲ್ಲಿ ಕೆಲಸಕ್ಕಿದ್ದ ಕವಿತಾ ಅವರು ಎಂದಿನಂತೆ ಕೆಲಸಕ್ಕೆ ಬಂದಿದ್ದಾರೆ. ಹಾಗೆಯೇ ಸಂಜೆ ಹಿಂದಿರುಗುವಾಗ ತಾಯಿ ಮನೆಗೆ ಹೋಗುವುದಾಗಿ ಹೇಳಿದ್ದಾರೆ. ಆದ್ರೆ ರಾತ್ರಿ ಹೊತ್ತಾದರೂ ಕವಿತಾ ಅವರು ತಾಯಿ ಮನೆಗೂ ಬಾರದೆ ಇತ್ತ ಕಡಂಬುವಿನಲ್ಲಿರುವ ಗಂಡನ ಮನೆಗೂ ಬಾರದಿದ್ದಾಗ ಕುಟುಂಬಸ್ಥರು ಗಾಬರಿಗೊಂಡಿದ್ದಾರೆ.
ಬಳಿಕ ಕವಿತಾ ಅವರ ಸಹೋದರ ಗಿರೀಶ್ ಎಂಬವರು ಸುತ್ತ ಮುತ್ತ ಪರಿಸರದಲ್ಲೂ ವಿಚಾರಿಸಿದ್ದಾರೆ. ಆ ಬಳಿಕ ಬಾವ ನಾಗೇಶ್ ಅವರಿಗೆ ವಿಚಾರ ತಿಳಿಸಿದ್ದಾರೆ. ಅದರಂತೆ ಇದೀಗ ಕವಿತಾ ಅವರ ಪತಿ ನಾಗೇಶ್ ವಿಟ್ಲ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶೋಧಕಾರ್ಯ ಮುಂದುವರಿಸಿದ್ದಾರೆ.