
ಸಿದ್ದರಾಮಯ್ಯಗೆ ಚಪ್ಪಲಿ ಎಸೆಯುತ್ತೇವೆ: ಮಾದಿಗ ಮುಖಂಡ ದಂಡೋರ ಹೇಳಿಕೆ!
Thursday, October 20, 2022
ರಾಯಚೂರು: ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ರಾಯಚೂರು ಪ್ರವಾಸದ ವೇಳೆ ಚಪ್ಪಲಿ ಎಸೆದು ಘೇರಾವ್ ಹಾಕುವುದಾಗಿ ಮಾದಿಗ ದಂಡೋರ ರಾಜ್ಯ ಅಧ್ಯಕ್ಷ ಬಿ.ನರಸಪ್ಪ ದಂಡೋರ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾದಿಗ ಸಮಾಜಕ್ಕೆ ಒಳ ಮೀಸಲಾತಿ ಕಲ್ಪಿಸುವಲ್ಲಿ ತನ್ನ ಅಧಿಕಾರದ ಅವಧಿಯಲ್ಲಿ ಸಿದ್ದರಾಮಯ್ಯ ನಿರ್ಲಕ್ಷ್ಯ ತೋರಿದ್ದಾರೆ. ಸದಾಶಿವ ಆಯೋಗ ವರದಿ ಜಾರಿ ಮಾಡದೇ ಅದನ್ನ ಮೂಲೆಗುಂಪು ಮಾಡಿದ್ದಾರೆ. ಅಹಿಂದ ನಾಯಕ ಎನ್ನುತ್ತಾ ಪಕ್ಷದಲ್ಲಿದ್ದ ಇತರ ಅಹಿಂದ ವರ್ಗದ ನಾಯಕರನ್ನು ಸೋಲಿಸಿದ್ದಾರೆ ಎಂದು ಆರೋಪಿಸಿದರು.
ಹೀಗಾಗಿ ಸಿದ್ದರಾಮಯ್ಯ ವಿರುದ್ಧ ಅಕ್ಟೋಬರ್ 21 ಹಾಗೂ 22 ರಂದು ಗೋಬ್ಯಾಕ್ ಚಳವಳಿ ಮಾಡಿ ಚಪ್ಪಲಿ ಎಸೆದು ಪ್ರತಿಭಟನೆ ಮಾಡಲಾಗುವುದು ಎಂದು ದಂಡೋರ ತಿಳಿಸಿದ್ದಾರೆ.