
NITK ಟೋಲ್ ಗೇಟ್ ಮುತ್ತಿಗೆ ಪ್ರಕರಣ; ಹೋರಾಟಗಾರರ ವಿರುದ್ಧ ಎರಡು ಪ್ರತ್ಯೇಕ FIR!
ಮಂಗಳೂರು: ಅಕ್ಟೋಬರ್ 18 ರಂದು ಸುರತ್ಕಲ್ NITK ಟೋಲ್ ಗೇಟ್ ವಿರುದ್ಧ ಬೃಹತ್ ಪ್ರತಿಭಟನೆ ಆಯೋಜಿಸಿದ್ದ ಹೋರಾಟಗಾರರ ಮೇಲೆ ಸುರತ್ಕಲ್ ಠಾಣೆಯಲ್ಲಿ ಎರಡು ಪ್ರತ್ಯೇಕ FIR ದಾಖಲಿಸಲಾಗಿದೆ.
ಮಂಗಳವಾರ ಹೋರಾಟಗಾರರು ಗುಂಪುಗೂಡಿ ಟೋಲ್ ಗೇಟ್ ಮುತ್ತಿಗೆ ಹಾಕಿದ್ದಲ್ಲದೇ, ರಸ್ತೆ ಸಂಚಾರಕ್ಕೆ ತಡೆ ಉಂಟು ಮಾಡಿದ್ದರು.
ಇದೀಗ ಹೋರಾಟಗಾರರ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಟೋಲ್ ಸಂಗ್ರಹ ಏಜೆನ್ಸಿ ನೂರ್ ಮೊಹಮ್ಮದ್ ಸಂಸ್ಥೆಯ ಮ್ಯಾನೇಜರ್ ಶಿಶುಪಾಲ್ ಹಾಗೂ NMPRCL ಇದರ ಪ್ರಾಜೆಕ್ಟ್ ಡೈರೆಕ್ಟರ್ ಲಿಂಗೇಗೌಡ ಅವರು ಎರಡು ಪ್ರತ್ಯೇಕ ದೂರು ದಾಖಲಿಸಿದ್ದಾರೆ.
FIR ನಲ್ಲಿ 20 ರಿಂದ 25ಕ್ಕೂ ಅಧಿಕ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಅಪರಿಚಿತ ವ್ಯಕ್ತಿಗಳು ಟೋಲ್ ಗೇಟ್ ಮುಂಭಾಗ ಅಕ್ರಮ ಕೂಟ ನಡೆಸಿ ಘೋಷಣೆ ಕೂಗುತ್ತಾ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿದ್ದಾಗಿ ದೂರಲಾಗಿದೆ.
ಭಾರತೀಯ ದಂಡ ಸಂಹಿತೆ (IPC) 143, 147, 341, 283, 149 ಸೆಕ್ಷನ್ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಇದೇ ಅಕ್ಟೋಬರ್ 28 ರಂದು ಇನ್ನೊಂದು ಸುತ್ತಿನ ಹೋರಾಟಕ್ಕೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನಿರ್ಧರಿಸಿದೆ.