
KANTHARA: ನಟ ಚೇತನ್ ಗೆ ರಿಯಲ್ ಸ್ಟಾರ್ ಉಪೇಂದ್ರ ಚಾಟಿ...!!!
Thursday, October 20, 2022
ಭೂತಾರಾಧನೆ ಸಂಸ್ಕೃತಿ ಹಿಂದೂಗಳದ್ದು ಅಲ್ಲ ಅಂತ ಚಕಾರವೆತ್ತಿರುವ ನಟ ಚೇತನ್ ಗೆ ರಿಯಲ್ ಸ್ಟಾರ್ ಉಪೇಂದ್ರ ಚಾಟಿ ಬೀಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಉಪೇಂದ್ರ, ಯಾವತ್ತು ಯಾರೂ ಕೂಡ ಅಷ್ಟೇ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬಾರದು. ಭೂತಾರಾಧನೆ ಅದು ಅವರವರ ವೈಯಕ್ತಿಕ ನಂಬಿಕೆ. ನಾನು ಕೂಡ ಅದೇ ಊರಿನಿಂದ ಬಂದವ, ಹಾಗಿರುವಾಗ ನನಗೆ ಭೂತಾರಾಧನೆಯಲ್ಲಿ ವಿಶೇಷವಾದ ನಂಬಿಕೆ ಇದೆ. ಜೊತೆಗೆ ನನ್ನ ತಂದೆ ಇವತ್ತಿಗೂ ನಾಗಾರಾದನೆಯನ್ನು ಮಾಡಿಕೊಂಡು ಬರುತ್ತಿದ್ದಾರೆ ಎಂದರು.
ಕರಾವಳಿ ಭಾಗದ ಸಂಸ್ಕೃತಿ ಹಾಗೂ ದೈವಗಳ ಆರಾಧನೆಯನ್ನ ಕಾಂತಾರ ಸಿನೆಮಾದಲ್ಲಿ ಅಚ್ಚುಕಟ್ಟಾಗಿ ಬಿಂಬಿಸಿದ್ದಾರೆ. ಪ್ರಕೃತಿಗೂ, ಮನುಷ್ಯನಿಗೂ ಇರುವ ಸಂಬಂಧ ಎಂತಹದ್ದು ಅನ್ನೋದನ್ನ ಸಿನಿಮಾದಲ್ಲಿ ವಿವರಿಸಿದ್ದಾರೆ ಎಂದು ಹೇಳಿದ್ರು.