ಟೋಲ್ ಮುತ್ತಿಗೆ; ಪೊಲೀಸ್ ಲಾಠಿ ಚಾರ್ಜ್ ನಿಂದ ಗಾಯ
Tuesday, October 18, 2022
ಮಂಗಳೂರು: NITK ಟೋಲ್ ಸಮಯದಲ್ಲಿ ನಡೆದ ನೂಕಾಟ ತಳ್ಳಾಟ ವೇಳೆ ಪೊಲೀಸ್ ಲಾಠಿಚಾರ್ಜ್ ನಿಂದ ಪ್ರತಿಭಟನಾಕಾರನಿಗೆ ಗಾಯವಾಗಿದ್ದಾಗಿ ಹೋರಾಟಗಾರರು ಆರೋಪಿಸಿದ್ದಾರೆ.
ಅಬ್ದುಲ್ ಖಾದರ್ ಎಂಬವರ ಕಣ್ಣು ಹಾಗೂ ಕೈಗೆ ಗಾಯವಾಗಿದ್ದಾಗಿ ಹೋರಾಟಗಾರರು ತಿಳಿಸಿದ್ದಾರೆ. ಗಾಯಾಳುವಿಗೆ ಸುರತ್ಕಲ್ ನ ಖಾಸಗಿ ಆಸ್ಪತ್ರೆ ಚಿಕಿತ್ಸೆ ಕೊಡಿಸಿದ್ದಾಗಿ ಹೋರಾಟಗಾರ, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪ್ಪಾಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನು ಮುತ್ತಿಗೆ ವೇಳೆ ವಶಕ್ಕೆ ಪಡೆಯಲಾದ ಪ್ರತಿಭಟನಕಾರರನ್ನು ಪಾಂಡೇಶ್ವರ ಠಾಣೆ, ಸುರತ್ಕಲ್ ಬಂಟರ ಭವನ ಮುಂತಾದೆಡೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
