
Belthangadi: ಶಾಸಕ ಹರೀಶ್ ಪೂಂಜಾ ಅವ್ರು ಒಬ್ಬ ಉತ್ತಮ ನಟ-ನಿರ್ದೇಶಕ
ಬೆಳ್ತಂಗಡಿ: ಬೆಳ್ತಂಗಡಿಯ ಹರೀಶ್ ಪೂಂಜಾ ಅವರು ಓರ್ವ ಸ್ಪುರದ್ರೂಪಿ ಶಾಸಕ. ಒಂದು ವೇಳೆ ಅವರು ಶಾಸಕರಾಗದಿದ್ದಲ್ಲಿ ಇಂದು ಉತ್ತಮ ನಟ, ನಿರ್ದೇಶಕನಾಗಿ ಹೊರಹೊಮ್ಮುತ್ತಿದ್ರು ಅಂತ ರಾಜ್ಯ ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ ಟೀಕಿಸಿದ್ದಾರೆ.
ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರೀಶ್ ಪೂಂಜಾ ಅವ್ರು ಸಂಸದರ ಸ್ಥಾನಕ್ಕಾಗಿ ಈ ರೀತಿಯ ಸಂಭಾಷಣೆ, ನಿರ್ದೇಶನದ ಜೊತೆಗೆ ನಟನೆ ಕೂಡಾ ಮಾಡ್ತಾ ಇದ್ದಾರೆ ಅಂತ ಕಾಣ್ತಾ ಇದೆ. ಯಾಕಂದ್ರೆ ಇತ್ತೀಚೆಗೆ ಪ್ರವೀಣ್ ನೆಟ್ಟಾರು ಹತ್ಯೆಯ ಸಂದರ್ಭ ಬೆಳ್ಳಾರೆಯಲ್ಲಿ ಕೂಡಾ ಒಂದು ವೀಡಿಯೋವನ್ನ ಮಾಡ್ಸಿದ್ರು. ನೀವೆ ಮುಂದಿನ ಸಂಸದರಾಗಬೇಕು ಅಂತ ಹೇಳ್ಸಿದ್ರು. ಇದನ್ನೆಲ್ಲ ನೋಡುವಾಗ ಇವರು ಪ್ರಚಾರದ ಜೊತೆಗೆ ಸಂಸದರ ಸ್ಥಾನಕ್ಕೆ ಪೈಪೋಟಿ ಮಾಡ್ತಾ ಇದ್ದಾರೆ ಅಂತ ಕಾಣ್ತಿದೆ. ಜೊತೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಕಾರನ್ನ ಅಳುಗಾಡಿಸಿದರ ಹಿಂದೆ ಕೂಡ ಇವರ ಕೈವಾಡ ಇದೆ ಅಂತ ಬಿಜೆಪಿ ವಲಯದಲ್ಲೇ ಗುಸು ಗುಸು ಕೇಳಿ ಬರ್ತಿದೆ. ಹೀಗಿರುವಾಗ ಶಾಸಕ ಹರೀಶ್ ಪೂಂಜಾ ಅವರು ಇಷ್ಟೆಲ್ಲ ನಾಟಕ ಮಾಡುವ ಬದಲು ಗುತ್ತಿಗೆಗೆ ಒಂದು ಬೋರ್ಡ್ ಹಾಕಿ ನಾನು ಹಿಂದುತ್ವದ ಶಾಸಕ ಅಂತ ಹೇಳಿಕೊಂಡು ಬರಬಹುದಲ್ಲ. ಬದಲಾಗಿ ಯಾಕೆ ಸುಮ್ಮ ಸುಮ್ಮನೆ ಮಾನ ಹರಾಜು ಹಾಕಿಕೊಳ್ತಾರೆ ಅಂತ ಟೀಕಿಸಿದ್ರು.
ಇನ್ನು ಇತ್ತೀಚೆಗೆ ಶಾಸಕ ಹರೀಶ್ ಪೂಂಜಾಗೆ ಯಾರೋ ಒಬ್ರು ತಲ್ವಾರ್ ಇಡ್ಕೊಂಡು ಗುರಾಯಿಸಿದ ಬಗ್ಗೆ ಮಾತನಾಡಿದ ಅವ್ರು, ಶಾಸಕರು ಉತ್ತಮ ಸಂಭಾಷಣೆಕಾರ. ಯಾಕಂದ್ರೆ ತಲ್ವಾರ್ ನ ಬಗ್ಗೆ ಸವಿವವರವಾಗಿ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ತಲ್ವಾರ್ ನ ಹಿಡಿತ ದಪ್ಪಗೆ ಹಾಗೂ ಹರಿತವಾದ ಚೂಪಾದ ಅಂತೆಲ್ಲ ವಿವರಿಸಿದ್ದಾರೆ. ಒಂದು ವೇಳೆ ಆತನಿಗೆ ತಲ್ವಾರ್ ಕೊಟ್ಟು ಇವ್ರೇ ಯಾಕೆ ನಾಟಕವಾಡಿರಬಾರದು ಅಂತ ಹೇಳಿದ್ರು.