
ಮಂಗಳೂರು: "ನೀವಾದ್ರೂ ಕಾಲ್ ಮಾಡಿ ವಿಚಾರಿಸಿದ್ರಾ?": ಪೊಲೀಸ್ ಕಮೀಷನರ್ ಗೆ ಪ್ರತಿಭಾ ಕುಳಾಯಿ ತರಾಟೆ!
![]() |
ಮಂಗಳೂರು: NITK ಟೋಲ್ ಗೇಟ್ ಮುತ್ತಿಗೆ ಸಮಯದಲ್ಲಿ ಪೊಲೀಸ್ ಕಮೀಷನರ್ ವಿರುದ್ಧವೂ ಆಕ್ರೋಶ ವ್ಯಕ್ತವಾಯಿತು. ರಾತ್ರೋ ರಾತ್ರಿ ಹೋರಾಟಗಾರರಿಗೆ ನೋಟೀಸ್ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ 'ಟೋಲ್ ಗೇಟ್ ಮುತ್ತಿಗೆ' ಗೂ ಮುನ್ನ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭ ಅದೆಷ್ಟೇ ಸಮಜಾಯಿಷಿ ನೀಡಲು ಕಮೀಷನರ್ ಪ್ರಯತ್ನಪಟ್ಟರು, ಪ್ರತಿಭಾ ಕುಳಾಯಿ ಮಾತಿಗೆ ತಣ್ಣಗಾಗಬೇಕಾಯಿತು.
"ನನಗೆ ಎಸಿಪಿ ಅವರ ಜೊತೆ ಮಾತನಾಡಲಿಕ್ಕಿಲ್ಲ. ನಮ್ಮ ಮನೆಗೆ ಪೊಲೀಸ್ ದಾಳಿ ಮಾಡಿದ ವಿಚಾರ ತಿಳಿದ ಕೂಡಲೇ ಅವರಿಗೆ ಕಾಲ್ ಮಾಡಿದ್ದೆ. ಆದರೆ ಅವರು ರಾತ್ರಿಯಾಗಿದ್ದರಿಂದ ಮಲಗಿದ್ದರೋ ಏನೋ..? ಆ ರಾತ್ರಿಯಲ್ಲಿ ಮನೆಗೆ 5 ಮಂದಿ ಪೊಲೀಸರು ಬರುವ ಅವಶ್ಯಕತೆಯಾದರೂ ಏನಿತ್ತು?" ಅಂತಾ ಪ್ರತಿಭಾ ಕಮೀಷನರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಈ ಸಮಯದಲ್ಲಿ ಕಮೀಷನರ್ ಸ್ಪಷ್ಟನೆ ನೀಡಲು ಮುಂದಾದರು. "ರಾತ್ರಿ ಹೋಗುವುದು ನನಗೆ ಗೊತ್ತಿದ್ದರೆ ನಾನು ಬೇಡ ಎನ್ನುತ್ತಿದ್ದೆ. ನಮ್ಮ ಮನೆಯಲ್ಲೂ ಹೆಣ್ಮಕ್ಕಳಿದ್ದಾರೆ" ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಭಾ, "ಕನಿಷ್ಟ ನೀವಾದರೂ ನನಗೆ ಕರೆ ಮಾಡಿ ಏನಾಯ್ತು ಎಂದು ವಿಚಾರಿಸಿದ್ರಾ?" ಎಂದು ಪ್ರಶ್ನಿಸಿದರು.