-->
ಟೋಲ್ ಮುತ್ತಿಗೆ ಯಶಸ್ವಿ; ಹಲವರು ವಶಕ್ಕೆ; ನೂಕಾಟ, ತಳ್ಳಾಟ

ಟೋಲ್ ಮುತ್ತಿಗೆ ಯಶಸ್ವಿ; ಹಲವರು ವಶಕ್ಕೆ; ನೂಕಾಟ, ತಳ್ಳಾಟ

 




ಮಂಗಳೂರು: ಪೊಲೀಸರ ಸರ್ಪಗಾವಲಿನ ಮಧ್ಯೆಯೂ ಸುರತ್ಕಲ್ NITK ಟೋಲ್ ಗೇಟ್ ಗೆ ಮುತ್ತಿಗೆ ಹಾಕುವಲ್ಲಿ ಹೋರಾಟಗಾರರು ಯಶಸ್ವಿಯಾದರು. ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಪ್ರತಿಭಟನಾಕಾರರು ಟೋಲ್ ಗೇಟ್ ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಪೊಲೀಸ್ ಹಾಗೂ ಪ್ರತಿಭಟನಾಕಾರರ ನಡುವೆ ಭಾರೀ ನೂಕಾಟ, ತಳ್ಳಾಟ ನಡೆಯಿತು. 







ಟೋಲ್ ಗೇಟ್ ಮೇಲೇರಿದ ರೈ

ಟೋಲ್ ಗೇಟ್ ಮುತ್ತಿಗೆ ಹಾಕಿದ ಹೋರಾಟಗಾರರ ನೇತೃತ್ವ ವಹಿಸಿದ್ದವರಲ್ಲಿ ಒಬ್ಬರಾದ ಮಿಥುನ್ ರೈ ಟೋಲ್ ಗೇಟ್ ಕೇಂದ್ರ ಮೇಲೆ ಹತ್ತಿ ನಿಂತುಕೊಂಡು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಸಂಸದ, ಶಾಸಕ ಹಾಗೂ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳು ಮೊಳಗಿದವು. 


ಕಮೀಷನರ್ ವಿರುದ್ಧ ಪ್ರತಿಭಾ ಕುಳಾಯಿ ಆಕ್ರೋಶ


ಸ್ಥಳದಲ್ಲಿ ಭದ್ರತೆ ಒದಗಿಸಲು ಖುದ್ದು ಪೊಲೀಸ್ ಕಮೀಷನರ್ ಅವರೇ ಹಾಜರಿದ್ದು ನಿಯಂತ್ರಿಸಲು ಪ್ರಯತ್ನಪಟ್ಟರು. ಈ ಸಮಯ ಪೊಲೀಸ್ ನೋಟೀಸ್ ಪಡೆದಿದ್ದ ಹೋರಾಟಗಾರರು ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ನೋಟೀಸ್ ನೀಡುವ ವಿಚಾರದಲ್ಲಿ ಪೊಲೀಸರು ತೋರಿದ ಕ್ರಮವನ್ನು ಕಮೀಷನರ್ ಮುಂದೆಯೇ ಆಕ್ಷೇಪಿಸಿ ಮಾತನಾಡಿದ್ದೂ ನಡೆಯಿತು. 


ಹಲವರು ವಶಕ್ಕೆ

ತೀವ್ರ ಹೋರಾಟದ ನಡುವೆಯೇ ಹಲವು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. 


ಪ್ರತಿಭಟನೆಯಲ್ಲಿ ಉಡುಪಿ ಹಾಗೂ ದ.ಕ. ಜಿಲ್ಲೆಯ ಹಲವು ರಾಜಕೀಯ, ಸಾಮಾಜಿಕ ಸಂಘ ಸಂಸ್ಥೆಗಳು ಸದಸ್ಯರು ಭಾಗವಹಿಸಿದ್ದರು.


Ads on article

Advertise in articles 1

advertising articles 2

Advertise under the article