ಟೋಲ್ ಗೇಟ್ ವಿರೋಧಿ ಹೋರಾಟ; ಬಿಗಿ ಭದ್ರತೆ, ಕಮೀಷನರ್ ಭೇಟಿ
Tuesday, October 18, 2022
ಮಂಗಳೂರು: ಸುರತ್ಕಲ್ NITK ಟೋಲ್ ಗೇಟ್ ವಿರುದ್ಧ ಹಮ್ಮಿಕೊಳ್ಳಲಾದ ನೇರ ಕಾರ್ಯಾಚರಣೆ ಹಿನ್ನೆಲೆ ಟೋಲ್ ಗೇಟ್ ಸುತ್ತಲೂ ಭಾರೀ ಭದ್ರತೆ ಒದಗಿಸಲಾಗಿದೆ.
ಬೆಳಿಗ್ಗೆ 10 ಗಂಟೆ ಸುಮಾರಿಗೆ ಟೋಲ್ ಗೇಟ್ ಮುತ್ತಿಗೆ ನಡೆಯಲಿದೆ. ಸಾವಿರಾರು ಹೋರಾಟಗಾರರು ಭಾಗವಹಿಸುವ ನಿರೀಕ್ಷೆ ಇದೆ.
ಸ್ಥಳದಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಭದ್ರತೆ ಒದಗಿಸಲಾಗಿದೆ. ಉನ್ನತ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
6ಕೆಎಸ್ಆರ್ ಪಿ, 5 ಸಿಎಆರ್,250 ಸಿವಿಲ್, 4ಎಸಿಪಿ, 15 ಇನ್ಸ್ ಪೆಕ್ಟರ್ ಸೇರಿದಂತೆ500 ಕ್ಕೂ ಅಧಿಕ ಪೊಲೀಸರ ನಿಯೋಜನೆಗೊಳಿಸಿದ್ದಾಗಿ ಕಮೀಷನರ್ ತಿಳಿಸಿದ್ದಾರೆ.

