-->
puttur: ಪುತ್ತೂರಿನಲ್ಲಿ ಹಲಾಲ್ ವಿರುದ್ಧ ಜಾಗೃತಿ ಸಭೆ...!

puttur: ಪುತ್ತೂರಿನಲ್ಲಿ ಹಲಾಲ್ ವಿರುದ್ಧ ಜಾಗೃತಿ ಸಭೆ...!




ಪುತ್ತೂರು: ದೇಶಾದ್ಯಂತ ಇಸ್ಲಾಂ ಆಧಾರಿತ `ಹಲಾಲ್' ವ್ಯವಸ್ಥೆ ದೇಶದ ಆರ್ಥಿಕ ವ್ಯವಸ್ಥೆಯನ್ನು ಮೆಟ್ಟಿ ನಿಲ್ಲುವಷ್ಟು ಬಲಿಷ್ಠವಾಗಿ ಬೆಳೆದಿದೆ. ಇದರ ವಿರುದ್ಧ ಕಾನೂನು ರೀತಿಯಲ್ಲಿ ಹೋರಾಟ ಆಗಬೇಕಾಗಿದ್ದು, ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಲು ಅ.20ರಂದು ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜಾಗೃತಿ ಸಭೆ ನಡೆಯಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕಾರ ಚಂದ್ರಮುಗೇರ ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗೃತಿ ಸಭೆಯಲ್ಲಿ ಹಲಾಲ್ ಅರ್ಥ ವ್ಯವಸ್ಥೆಯ ಬಗ್ಗೆ ಸಮಗ್ರ ಅಧ್ಯಯನ ನಡೆಸಿರುವ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ್ ಸಿಂಧೆ, ರಾಜ್ಯ ಸಮನ್ವಯಕಾರ ಗುರುಪ್ರಸಾದ್ ಗೌಡ, ಚಿಂತಕ ಶ್ರೀಕೃಷ್ಣ ಉಪಾಧ್ಯಾಯ ಮತ್ತಿತರರು ಭಾಗವಹಿಸಿ ಮಾಹಿತಿ ನೀಡುವರು. ಅಭಿನವ ಭಾರತ ಮಿತ್ರಮಂಡಳಿ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಆಯೋಜನೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.

ಹಲಾಲ್ ಪ್ರಮಾಣಪತ್ರವನ್ನು ಯಾವುದೇ ಸರ್ಕಾರಿ ಸಂಸ್ಥೆಗಳು ನೀಡುವುದಲ್ಲ. ನಮ್ಮ ಉತ್ಪನ್ನಗಳಿಗೆ ನಾವು ಜಮೀಯತ್ ಉಲಾಮ ಹಿ ಹಿಂದ್ ಎಂಬ ಭಯೋತ್ಪಾನೆಗೆ ಸಹಕಾರ ನೀಡುತ್ತಿರುವ ಸಂಸ್ಥೆಯಿಂದ ಸಾವಿರಾರು ರೂಪಾಯಿ ನೀಡಿ ಪ್ರಮಾಣ ಪತ್ರ ಪಡೆಯಬೇಕಾಗಿದೆ.

ಭಾರತದಲ್ಲಿ ಎಫ್ಎಸ್ಎಸ್ಎಐ, ಎಫ್ಡಿಎ ನಂತಹ ಪ್ರಮಾಣಪತ್ರ ನೀಡುವ ಸರ್ಕಾರಿ ಸಂಸ್ಥೆಗಳು ಇರುವಾಗ ಪ್ರತ್ಯೇಕ ಮತದ ಆಧಾರದ ಮೇಲೆ ಪ್ರಮಾಣಪತ್ರ ನೀಡಿ, ಹಣ ಸಂಗ್ರಹ ಮಾಡುವುದು ಅತ್ಯಂತ ಅಪಾಯಕಾರಿಯಾಗಿದೆ. ಈ ಹಲಾಲ್ ಜಿಹಾದಿ ವಿರುದ್ದ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ದೇಶಕ್ಕೆ ಸಂಕಟ ಎದುರಾಗಲಿದೆ  ಎಂದು ಎಚ್ಚರಿಸಿದರು.

ಹಲಾಲ್ ಜಿಹಾದ್  ಭಾರತೀಯ ಅರ್ಥವ್ಯವಸ್ಥೆಗೆ ಸಂಕಟವಾಗಿರುವುದರಿಂದ  ದೀಪಾವಳಿ ಸಂದರ್ಭದಲ್ಲಿ ಹಲಾಲ್ ಉತ್ಪನ್ನಗಳನ್ನು ಬಳಕೆ ಮಾಡದೆ, ಹಲಾಲ್ ಮುಕ್ತ ವಸ್ತುಗಳನ್ನೇ ಬಳಕೆ ಮಾಡಬೇಕು. ದೀಪಾವಳಿ ಆಚರಣೆಯನ್ನು ಹಲಾಲ್ ಮುಕ್ತವಾಗಿ ಮಾಡಬೇಕು. ಹಲಾಲ್ ಇರುವ ಮಾರ್ಕೆಟ್ ವಸ್ತುಗಳನ್ನು ಬಹಿಷ್ಕರಸಬೇಕು. ಈ ನಿಟ್ಟಿನಲ್ಲಿಯೂ ಜಾಗೃತಿ ಮೂಡಿಸಲಾಗುವುದು ಎಂದರು.

Ads on article

Advertise in articles 1

advertising articles 2

Advertise under the article