
Kanthara: ಕಡಲತಡಿಯಲ್ಲೂ 'ಕಾಂತಾರ' ವೈಭವ; ರಿಷಬ್ ಶೆಟ್ರಿಗೆ ತುಳುನಾಡಿನ ನಮನ
Wednesday, October 19, 2022
ಉಡುಪಿ: ಕನ್ನಡ ಚಿತ್ರರಂಗದಲ್ಲೇ ದಾಖಲೆ ನಿರ್ಮಿಸಿದ 'ಕಾಂತಾರ' ಒಂದು ದಂತ ಕಥೆ ಸಿನೆಮಾ ಕರಾವಳಿ ಭಾಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸಿನೆಮಾ ಎರಡು ವಾರಗಳ ಬಳಿಕವೂ ಹೌಸ್ ಫುಲ್‌ಪ್ರದರ್ಶನ ಕಾಣುತ್ತಿದೆ.
ಕರುನಾಡಿಗೆ ತುಳುನಾಡಿನ ದೈವಗಳ ಕಾರಣಿಕ ಪರಿಚಯಿಸಿಕೊಟ್ಟ ಖ್ಯಾತ ನಿರ್ದೇಶಕ ರಿಷಬ್ ಶೆಟ್ಟಿಗೆ ಸಮಸ್ತ ತುಳುನಾಡಿನ ಪರವಾಗಿ ಮರಳು ಶಿಲ್ಪದ ಮೂಲಕ ಅಭಿನಂದಿಸಲಾಯಿತು.
ಮರಳು ಶಿಲ್ಪದ ಮೂಲಕ ರಕ್ಷಕ ಶಕ್ತಿಯನ್ನು ಸಾರಿದ ವರಹಾರೂಪಿ ಪಂಜುರ್ಲಿ ಮತ್ತು ದೈವದ ರೂಪದಲ್ಲಿ ಅವತರಿಸಿದ ನಟ ರಿಷಬ್ ಶೆಟ್ಟಿಯವರನ್ನು ಕೇಂದ್ರವಾಗಿರಿಸಿ, 4 ಅಡಿ ಎತ್ತರದ ಕಲಾಕೃತಿಯನ್ನು ಕಲಾವಿದರಾದ ಹರೀಶ್ ಸಾಗಾ, ಸಂತೋಷ ಭಟ್ ಹಾಲಾಡಿ, ಪ್ರಸಾದ್ ಆರ್. ನೇತೃತ್ವದ SAND theme ತಂಡವು ಕುಂದಾಪುರದ ಕೋಡಿ ಹಳೇ ಅಳಿವೆ ಬೀಚ್ ನಲ್ಲಿ ಮಾಡಿದರು. ಇದು ಬೀಚ್ ಗೆ ಬರುವ ಪ್ರವಾಸಿಗರನ್ನು ಸೆಳೆಯಿತು.
ವೀಡಿಯೋ ವೀಕ್ಷಿಸಿ