
Delhi: ಎಐಸಿಸಿಯ ನೂತನ ಅಧಿಪತಿಯಾಗಿ ಮಲ್ಲಿಕಾರ್ಜುನ ಖರ್ಗೆ...!
Wednesday, October 19, 2022
ದೆಹಲಿ: ಎಐಸಿಸಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಯವರಿಗೆ ಸಂಸದ ಶಶಿ ತರೂರ್ ಪ್ರಬಲ ಪೈಪೋಟಿ ನೀಡಿದ್ರು. ಆದರೆ ಮಲ್ಲಿಕಾರ್ಜುನ ಖರ್ಗೆ ಪರವಾಗಿ ಅತೀ ಹೆಚ್ಚಿನ ಮತಗಳು ಲಭಿಸಿದ ಕಾರಣ ಗೆಲುವಿನ ನಗೆ ಬೀರಿದ್ರು. ಈ ಮೂಲಕ 24 ವರ್ಷಗಳ ನಂತರ ಗಾಂಧಿಯೇತರರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಮಲ್ಲಿಕಾರ್ಜುನ ಖರ್ಗೆಯವರಿಗೆ ಪರಾಜಿತ ಅಭ್ಯರ್ಥಿ ಶಶಿ ತರೂರ್ ಅಭಿನಂದನೆ ಸಲ್ಲಿಸಿದ್ದಾರೆ. ಪಕ್ಷದ ಪುನರುಜ್ಜೀವನ ಆರಂಭವಾಗಿದೆ ಎಂದು ನಾನು ನಂಬುತ್ತೇನೆ ಎಂದು ಶಶಿ ತರೂರ್ ಹೇಳಿದ್ದಾರೆ. ಮೊನ್ನೆ ಮತದಾನದ ದಿನವೂ ಶಶಿ ತರೂರ್ ಈ ಮಾತುಗಳನ್ನು ಹೇಳಿದ್ದರು.
ಕರ್ನಾಟಕ ಮೂಲದವರಾದ ಖರ್ಗೆಯವರ ಗೆಲುವಿಗೆ ಕರ್ನಾಟಕ, ಅವರ ಊರು ಮತ್ತು ದೆಹಲಿಯಲ್ಲಿ ಅವರ ಕಚೇರಿ ಮುಂದೆ ಬೆಂಬಲಿಗರು ಸಂಭ್ರಮಿಸಿದರು.