
"ಇದು ಕೆಲವರ ನಿದ್ರಾಭಂಗ ಮಾಡುತ್ತೆ"; ಶರದ್ ಪವಾರ್ ಮುಂದೆ ಶಿಂಧೆ ಕುಹಕ!
Thursday, October 20, 2022
ಮುಂಬೈ: ಶಿವಸೇನೆಯ ಎರಡು ಬಣಗಳ ನಡುವಿನ ತಿಕ್ಕಾಟ ಕ್ರೀಡಾ ವಲಯವನ್ನೂ ಬಿಟ್ಟಿಲ್ಲ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಏರ್ಪಡಿಸಿದ್ದ ಔತಣ ಕೂಟದಲ್ಲೂ ರಾಜಕೀಯ ಮಾತುಗಳು ಕೇಳಿ ಬಂದವು.
"ದೇವೇಂದ್ರ ಫಡ್ನವೀಸ್ (ಮಹಾರಾಷ್ಟ್ರ ಡಿಸಿಎಂ), ಆಶಿಶ್ ಶೇಲಾರ್ (ಬಿಜೆಪಿ) ಮತ್ತು ಶರದ್ ಪವಾರ್ (NCP) ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನ ನೋಡ್ತಿದ್ರೆ, ಇದು ಕೆಲವರ ರಾತ್ರಿ ನಿದ್ದೆಯನ್ನು ಕಸಿಯುತ್ತದೆ" ಎಂದು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಯಾರ ಹೆಸರನ್ನು ನೇರವಾಗಿ ಪ್ರಸ್ತಾಪಿಸದೇ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆ ಪರೋಕ್ಷವಾಗಿ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಉದ್ದೇಶಿಸಿಯೇ ನೀಡಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.
ಅದಾಗ್ಯೂ, ತಾನು ಕ್ರಿಕೆಟ್ ಮಂಡಳಿಯ ಅಭಿವೃದ್ಧಿಯಲ್ಲಿ ರಾಜಕೀಯ ಮಾಡಲಾರೆ ಎಂದು ಶಿಂಧೆ ಕೊನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಶಿವಸೇನೆಯ ಠಾಕ್ರೆ ಬಣದ ವಿರುದ್ಧ ಬಂಡಾಯವೆದ್ದು ಆಡಳಿತಕ್ಕೆ ಬಂದ ಏಕನಾಥ ಶಿಂಧೆ ಪ್ರಸ್ತುತ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾರೆ.