
ಡಾಲರ್ ಮುಂದೆ ದಾಖಲೆ ಕುಸಿತ ಕಂಡ ರೂಪಾಯಿ!
Thursday, October 20, 2022
ಮುಂಬೈ: ಅಮೆರಿಕನ್ ಡಾಲರ್ ಮುಂದೆ ಭಾರತೀಯ ರೂಪಾಯಿ ಸಾರ್ವತ್ರಿಕ ದಾಖಲೆ ಕುಸಿತ ಕಂಡಿದೆ. ಬುಧವಾರ ಅಂತ್ಯಕ್ಕೆ ಡಾಲರ್ ಮುಂದೆ ರೂಪಾಯಿ ಮೌಲ್ಯ ₹83.10 ಕ್ಕೆ ಕುಸಿತ ಕಂಡಿದೆ.
ಭಾರತೀಯ ಷೇರುಪೇಟೆಯಿಂದ ವಿದೇಶಿ ಸಾಂಸ್ಥಿಕೆ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಹಣ ಹಿಂಪಡೆಯುತ್ತಿರುವುದು ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಇದರ ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರುತ್ತಿರುವುದು, ಸ್ಥಳೀಯ ಕರೆನ್ಸಿಯಲ್ಲಿ ಹೂಡಿಕೆ ಮಾಡಲು ವಿದೇಶಿ ಹೂಡಿಕೆದಾರರು ಹಿಂಜರಿಯುತ್ತಿರುವುದು ಕೂಡಾ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.
ಇತ್ತೀಚೆಗಷ್ಟೇ ರೂಪಾಯಿ ಮೌಲ್ಯ ಕುಸಿತ ಬಗ್ಗೆ ಪ್ರತಿಕ್ರಿಯಿಸಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್, ರೂಪಾಯಿ ಮೌಲ್ಯ ಕುಸಿಯುತ್ತಿಲ್ಲ, ಡಾಲರ್ ಮೌಲ್ಯ ಹೆಚ್ಚಿದೆ ಎಂದಿದ್ದರು. ಈ ಹೇಳಿಕೆಯು ಭಾರೀ ಟ್ರೋಲ್ ಗೀಡಾಗಿತ್ತು.